ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಶವ್‌ ವೆಂಕಟರಾಘವನ್‌ಗೆ ‘ಬಾರ್ಟನ್‌ ಪ್ರಶಸ್ತಿ’

Published 13 ಜೂನ್ 2024, 15:49 IST
Last Updated 13 ಜೂನ್ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ನೀಡುವ 2024ನೇ ಸಾಲಿನ ‘ಬಾರ್ಟನ್‌ ಜೀವಮಾನ ಸಾಧನೆ ಪ್ರಶಸ್ತಿ’ಗೆ ವ್ಯಂಗ್ಯಚಿತ್ರಕಾರ ಕೇಶವ್‌ ವೆಂಕಟರಾಘವನ್‌ ಅವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ಬೆಳ್ಳಿ ಸ್ಮರಣಿಕೆಯನ್ನು ಒಳಗೊಂಡಿದೆ.

ಜುಲೈ 6ರಂದು ನಡೆಯಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯ 17ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಾರ್ಷಿಕೋತ್ಸವದಲ್ಲಿ ಕೇಶವ್‌ ವೆಂಕಟರಾಘವನ್ ಅವರ ವ್ಯಂಗ್ಯ ಚಿತ್ರ ಪ್ರದರ್ಶವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

1961ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಕೇಶವ್ ವೆಂಕಟರಾಘವನ್ ಅವರು, ಹೈದರಾಬಾದ್‌, ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1982ರಲ್ಲಿ ತಮಿಳು ಪತ್ರಿಕೆ ‘ಆನಂದ್‌ ವಿಕಟನ್‌’ಗಾಗಿ ಸಂಗೀತ ಸಾಧಕರ ಚಿತ್ರಗಳನ್ನು ಬರೆಯಲು ಆರಂಭಿಸಿದರು. ಮುಂದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಂಗ್ಯಚಿತ್ರಕಾರರಿಂದ ಪ್ರೇರಣೆಗೊಂಡು ‘ರಾಜಕೀಯ ವ್ಯಂಗ್ಯಚಿತ್ರ’ ಬರೆಯಲು ಆರಂಭಿಸಿದರು. 1987ರಿಂದ 2019ರವರೆಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT