ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ರಿಸ್ಕ್‌–V’ ತಂತ್ರಜ್ಞಾನದ ಅರಿವು ಅಗತ್ಯ: ಬರ್ನಾರ್ಡ್ ಕ್ವೆಂಡ್ಟ್

ಭವಿಷ್ಯದ ಡಿಜಿಟಲ್ ಕರ್ನಾಟಕ: ಕಾರ್ಯಾಗಾರದಲ್ಲಿ ಬರ್ನಾರ್ಡ್ ಕ್ವೆಂಡ್ಟ್
Published 6 ಮಾರ್ಚ್ 2024, 19:44 IST
Last Updated 6 ಮಾರ್ಚ್ 2024, 19:44 IST
ಅಕ್ಷರ ಗಾತ್ರ

ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ‘ರಿಸ್ಕ್‌–V’ ತಂತ್ರಜ್ಞಾನದ ಅರಿವು ಅಗತ್ಯ ಎಂದು ಥೇಲ್ಸ್‌ ಗ್ರೂಪ್ ಮುಖ್ಯ ತಾಂತ್ರಿಕ ಅಧಿಕಾರಿ ಬರ್ನಾರ್ಡ್ ಕ್ವೆಂಡ್ಟ್ ಹೇಳಿದರು.

ರಿಸ್ಕ್‌–V (ರೆಡ್ಯೂಸ್‌ ಇನ್‌ಸ್ಟ್ರಕ್ಷನ್‌ ಸೆಟ್‌ ಕಂಪ್ಯೂಟರ್‌–5) ತಂತ್ರಜ್ಞಾನ ಮತ್ತು ಕಮ್ಯುನಿಟಿ ಆಫ್‌ ಪ್ರಾಕ್ಟೀಸ್‌ (ಸಿಒಪಿಐ) ಸಂಬಂಧಿಸಿದಂತೆ ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ನಡೆದ ‘ಭವಿಷ್ಯದ ಡಿಜಿಟಲ್ ಕರ್ನಾಟಕ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ತಾಂತ್ರಿಕ ಜ್ಞಾನ, ಸಾಫ್ಟ್‌ವೇರ್‌ ತಂತ್ರಜ್ಞಾನ ಮತ್ತು ಸೃಜನಶೀಲ ಪ್ರತಿಭೆಗಳು ಸಮ್ಮಿಳಿತವಾಗಿವೆ. ನಾವೀನ್ಯ ತಂತ್ರಜ್ಞಾನದ ಕ್ರಾಂತಿಗೆ ಭಾರತವು ಆಧಾರಸ್ತಂಭವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹೀಂದ್ರಾ ಮತ್ತು ಮಹೀಂದ್ರಾ ಉಪಾಧ್ಯಕ್ಷ ಡಾ. ಶಂಕರ್ ವೇಣುಗೋಪಾಲ್ ಮಾತನಾಡಿ, ‘ರಿಸ್ಕ್‌–V‘ ತಂತ್ರಜ್ಞಾನ ಮೇಲ್ನೋಟಕ್ಕೆ ವಾಹನ ಕ್ಷೇತ್ರಕ್ಕೆ ಸಂಬಂಧ ಪಡುವುದಿಲ್ಲ ಎಂದು ತೋರಿದರೂ ಈ ತಂತ್ರಜ್ಞಾನವು ವಾಹನಗಳ ವಿನ್ಯಾಸ ಆಟೊಮೊಟಿವ್ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಬಳಕೆಯಾಗಲಿದೆ’ ಎಂದು ತಿಳಿಸಿದರು.

ವಿಎಲ್‌ಎಸ್‌ಐ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಸತ್ಯ ಗುಪ್ತಾ, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ (ಸಿಜಿಐ) ಅಧ್ಯಕ್ಷ ಡಿ.ಕೆ. ಮೋಹನ್, ಸಿಜಿಐ ಸಿಇಒ ನಿತಿನ್ ಮೋಹನ್, ಸಿಐಟಿ ಪ್ರಾಂಶುಪಾಲರಾದ ಇಂದುಮತಿ ಮತ್ತು ಸಿಸಿಐಆರ್, ಸಿಐಟಿ ನಿರ್ದೇಶಕ ಡಾ.ಸಿರಿಲ್ ಪ್ರಸನ್ನ ರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT