ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮಹಿಳೆ ಕೊಲೆ: ಆನ್‌ಲೈನ್ ಸ್ನೇಹಿತ ಬಂಧನ

Published 23 ಏಪ್ರಿಲ್ 2024, 13:57 IST
Last Updated 23 ಏಪ್ರಿಲ್ 2024, 13:57 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎಂ. ಶೋಭಾ (48) ಕೊಲೆ ಪ್ರಕರಣದ ಆರೋಪಿ ನವೀನ್‌ ಗೌಡ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ನವೀನ್‌ ಗೌಡ, ನಗರದ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ. ಕೊಡಿಗೇಹಳ್ಳಿ ಬಳಿಯ ಗಣೇಶನಗರದ ಶೋಭಾ ಅವರನ್ನು ಏಪ್ರಿಲ್ 18ರಂದು ಕೊಲೆ ಮಾಡಿ ಪರಾರಿಯಾಗಿದ್ದ. ಶೋಭಾ ಮಗಳು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶೋಭಾ ಅವರು ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಎರಡನೇ ಮಗಳ ಜೊತೆ ನೆಲೆಸಿದ್ದರು. ಅವರ ಪತಿ ಹಾಗೂ ಮೊದಲ ಮಗಳು ಪ್ರತ್ಯೇಕವಾಗಿ ವಾಸವಿದ್ದರು. ಏಪ್ರಿಲ್ 18ರಂದು ಬೆಳಿಗ್ಗೆ ಎರಡನೇ ಮಗಳು ತಮ್ಮ ಪತಿ ಮನೆಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ಬಂದಿದ್ದ ನವೀನ್ ಗೌಡ, ಶೋಭಾ ಅವರನ್ನು ಕತ್ತು ಹಿಸುಕಿ ಕೊಂದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಸಾಮಾಜಿಕ ಮಾಧ್ಯಮದಿಂದ ಪರಿಚಯ: ‘ಶೋಭಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಖಾತೆ ಹೊಂದಿದ್ದರು. ಅದೇ ಖಾತೆಗೆ ಆರೋಪಿ ನವೀನ್‌ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಶೋಭಾ ಸ್ವೀಕರಿಸಿದ್ದರು. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದ ಇಬ್ಬರೂ ಮಾತುಕತೆ ಆರಂಭಿಸಿದ್ದರು. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು ಎಂಬ ಮಾಹಿತಿ ಇದೆ. ಭೇಟಿಯಾಗುವುದಾಗಿ ಹೇಳಿದ್ದ ನವೀನ್, ಕೆಲ ದಿನಗಳ ಹಿಂದೆಯಷ್ಟೇ ಶೋಭಾ ಅವರ ಮನೆಗೆ ಬಂದು ಹೋಗಿದ್ದ. ಏಪ್ರಿಲ್ 18ರಂದು ಎರಡನೇ ಬಾರಿ ಮನೆಗೆ ಬಂದಿದ್ದ ನವೀನ್‌ ಹಾಗೂ ಶೋಭಾ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ತಿಳಿಸಿದರು.

‘ಕೊಲೆ ನಂತರ ಆರೋಪಿ ನವೀನ್, ಶೋಭಾ ಅವರ ಕಾರಿನಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದ. ಸಲುಗೆ ಕಾರಣಕ್ಕೆ ಈ ಕೊಲೆ ನಡೆದಿರುವ ಮಾಹಿತಿ ಇದೆ’ ಎಂದು ಹೇಳಿದರು.

ಶೋಭಾ
ಶೋಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT