ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಬಾವಿ: ಉದ್ಯಾನ ಲೋಕಾರ್ಪಣೆ

Last Updated 9 ಜನವರಿ 2021, 18:56 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಕೊಟ್ಟಿಗೆಪಾಳ್ಯ ವಾರ್ಡ್‌ನಲ್ಲಿ ಬೆಟ್ಟದ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ, ರಸ್ತೆಗಳ ಕಾಮಗಾರಿಗೆ ಶಾಸಕ ಮುನಿರತ್ನ ಶನಿವಾರ ಚಾಲನೆ ನೀಡಿದರು.

ಕೊಟ್ಟಿಗೆಪಾಳ್ಯ ವಾರ್ಡ್‌ನಲ್ಲಿ ನಾಗರಬಾವಿಯಲ್ಲಿಬಿಡಿಎ ಬಡಾವಣೆಯ 13ನೇ ಬ್ಲಾಕ್‍ನಲ್ಲಿ ನಿರ್ಮಿಸಿರುವ ಉದ್ಯಾನ, ಮಕ್ಕಳ ಆಟದ ಮೈದಾನ, ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿದ ಅವರು, ‘ಜನರ ಆರೋಗ್ಯ ಮತ್ತು ನೆಮ್ಮದಿಗಾಗಿ ಉದ್ಯಾನ ನಿರ್ಮಿಸಿದ್ದೇವೆ. ದೇವಾಲಯಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯವನ್ನೂ ಕೈಗೆತ್ತಿಕೊಂಡಿದ್ದೇವೆ. ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನೂ ಹಂತ ಹಂತವಾಗಿ ಜೀರ್ಣೋದ್ಧಾರಗೊಳಿಸುತ್ತೇವೆ’ ಎಂದರು.

ಸ್ಥಳೀಯ ಮುಖಂಡರಾದ ಎಸ್.ವೆಂಕಟೇಶ್‍ಬಾಬು, ಜಿ.ಮೋಹನ್‍ಕುಮಾರ್, ಎಂ.ಮಂಜುನಾಥ್, ರವಿಗೌಡ, ಕೆಂಗುಂಟೆ ಕಾಳೇಗೌಡ, ಜಿ.ಮಾರುತಿ, ಕೃಷ್ಣಮೂರ್ತಿ, ಸಿ.ಪ್ರೇಮ್‍ಮುರಳಿ, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್.ಜಿ.ಉಮೇಶ್, ಮಿಥುನ್, ನಾಗರಿಕ ವೇದಿಕೆ ಅಧ್ಯಕ್ಷ ಎಸ್.ಕೆ.ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT