ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯ (ಕೆಪಿಎಂಇ) ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಐದು ಆಸ್ಪತ್ರೆಗಳ ವಿರುದ್ಧ ಎಫ್ಐಆರ್ ದಾಖಲಿಸಲು ಹಾಗೂ 14 ಸಂಸ್ಥೆಗಳಿಗೆ ದಂಡ ವಿಧಿಸಲು ಸೂಚಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯಲ್ಲಿ ಆದೇಶಿಸಲಾಗಿದೆ. ಬುಧವಾರ ನಡೆದ ಸಭೆಯಲ್ಲಿ ಕೆಪಿಎಂಇ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಗ್ಯಾಧಿಕಾರಿಗಳು 58 ಪ್ರಕರಣಗಳ ಬಗ್ಗೆ ವಿವರ ಸಲ್ಲಿಸಿದ್ದರು. ಇವುಗಳಲ್ಲಿ ನಿಯಮ ಉಲ್ಲಂಘಿಸಿದ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್ಗಳು ಹಾಗೂ ಪುನರ್ವಸತಿ ಕೇಂದ್ರಗಳ ಮೇಲೆ ಕ್ರಮಕೈಗೊಳ್ಳಲಾಗಿದೆ.

ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವಿದ್ಯಾರಣ್ಯಪುರದಲ್ಲಿರುವ ಸನ್ರೈಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಮಲಾನಗರದಲ್ಲಿರುವ ಸರ್ವಶಕ್ತಿ ಸಲಹಾ ಕೇಂದ್ರ, ಸಿ.ಕೆ. ಪಾಳ್ಯದಲ್ಲಿರುವ ಮಾ ಕ್ಲಿನಿಕ್, ಶೇಷಾದ್ರಿಪುರದಲ್ಲಿರುವ ಶ್ರೀ ಶಕ್ತಿ ಹೆಲ್ತ್ ಕೇರ್ ಹಾಗೂ ದೊಡ್ಡಕನ್ನಳ್ಳಿಯಲ್ಲಿರುವ ಹೆಲ್ತ್ಲೈನ್ ಪಾಲಿ ಕ್ಲಿನಿಕ್ ವಿರುದ್ಧ ಎಫ್ಐಆರ್ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

₹ 6.15 ಲಕ್ಷ ದಂಡ: 14 ಸಂಸ್ಥೆಗಳಿಗೆ ಒಟ್ಟು ₹ 6.15 ಲಕ್ಷ ದಂಡ ವಿಧಿಸಲಾಗಿದೆ. ಚಿಕ್ಕಬಾಣಾವರದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ₹ 75 ಸಾವಿರ ದಂಡ ಹಾಕಲಾಗಿದೆ. ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿರುವ ಅಂದ್ರಹಳ್ಳಿಯ ಮಾರುತಿ ಕ್ಲಿನಿಕ್, ಕಲ್ಯಾಣನಗರದ ಎಚ್ಎಸ್ಬಿಆರ್ ಲೇಔಟ್ನಲ್ಲಿರುವ ಟ್ರೈಲೈಫ್ ಆಸ್ಪತ್ರೆ, ಮಾರುತಿನಗರದಲ್ಲಿರುವ ಹುಸೈನ್ ಪಾಲಿ ಕ್ಲಿನಿಕ್, ಸಿಂಥನ್ ನಗರದ ವಿದ್ಯಾಸಾಗರ ಕ್ರಾಸ್ನಲ್ಲಿರುವ ಸುರಕ್ಷಾ ಆಸ್ಪತ್ರೆ, ಪೀಣ್ಯದ ಬಾಲಾಜಿನಗರದಲ್ಲಿರುವ ರೈಟ್ ಟೈಮ್ ಫೌಂಡೇಷನ್, ಕೆಂಗೇರಿಯಲ್ಲಿರುವ ಸಹನಾ ಫೌಂಡೇಷನ್ (ಸ್ಮೈಲ್ ಫೌಂಡೇಷನ್) ಪುನರ್ವಸತಿ ಕೇಂದ್ರಕ್ಕೆ ತಲಾ ₹ 50 ಸಾವಿರ ದಂಡ ವಿಧಿಸಲಾಗಿದೆ.

ಕಾಮಾಕ್ಷಿಪಾಳ್ಯದಲ್ಲಿರುವ ಸಂಜೀವಿನಿ ಹೆಲ್ತ್ ಸೆಂಟರ್, ಕೋನಪ್ಪನ ಅಗ್ರಹಾರದ ಗೋವಿಂದಶೆಟ್ಟಿ ಪಾಳ್ಯದಲ್ಲಿರುವ ಇನ್ಪಿನಿಟಿ ಕ್ಲಿನಿಕ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಮುನಿಸ್ವಾಮಿ ಲೇಔಟ್ನಲ್ಲಿರುವ ಬಾಲಾಜಿ ಕ್ಲಿನಿಕ್ಗೆ ಕೂಡ ತಲಾ ₹ 50 ಸಾವಿರ ದಂಡ ಹಾಕಲಾಗಿದೆ.

ತಿಗಳರಪಾಳ್ಯದಲ್ಲಿರುವ ಶಾರದಾ ಕ್ಲಿನಿಕ್ (ಮೌಲ್ಯ ಕ್ಲಿನಿಕ್), ನಾಗಶೆಟ್ಟಿಹಳ್ಳಿಯ ರೈಲ್ವೆ ಗೇಟ್ ಬಳಿಯಿರುವ ಸ್ನೇಹ ಕ್ಲಿನಿಕ್ ಹಾಗೂ ಬಸವೇಶ್ವರ ಲೇಔಟ್ನಲ್ಲಿರುವ ಫಸ್ಟ್ಕೇರ್ ಸೂಪರ್ ಸ್ಪೆಷಾಲಿಟಿ ಹೆಲ್ತ್ ಕೇರ್ ಆ್ಯಂಡ್ ಡಯಾಗ್ನೋಸಿಸ್ ಸೆಂಟರ್ಗೆ ತಲಾ ₹ 25 ಸಾವಿರ ಮತ್ತು ಕನಕಪುರ ಮುಖ್ಯರಸ್ತೆಯಲ್ಲಿರುವ ಗಗನ ಡೆಂಟಲ್ ಕೇರ್ ಕ್ಲಿನಿಕ್ಗೆ ₹ 15 ಸಾವಿರ ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.