ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳದಲ್ಲಿ ವಿವಿಧ ಸ್ಟಾರ್ಟ್‌ಅಪ್ ಕಂಪೆನಿಗಳು ತಮ್ಮ ಕೃಷಿ ಆಧಾರಿತ ಮೌಲ್ಯರ್ಧಿತ ಉತ್ಪನ್ನಗಳನ್ನು ಮಾರಾಟಕ್ಕ ಇಡಲಾಗಿತ್ತು
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
₹10 ಲಕ್ಷದ ಎತ್ತುಗಳು
ಕೃಷಿ ಮೇಳದಲ್ಲಿ ಜೋಡಿ ಎತ್ತುಗಳ ಮೆರವಣಿಗೆ ಗಮನ ಸೆಳೆಯಿತು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಹಿರಿಸಾವೆಯ ಸಂದೀಪ್ ಮುದ್ದೇಗೌಡ ಅವರ ಎತ್ತುಗಳ ಬೆಲೆಯೇ ₹10 ಲಕ್ಷ. ಮೂರೂವರೆ ವರ್ಷ ಪ್ರಾಯದ ಹಳ್ಳಿಕಾರ್ ತಳಿಗಳು ಮುಖ್ಯರಸ್ತೆಯಲ್ಲಿ ಕ್ಯಾಟ್‌ವಾಕ್ ಮಾಡುತ್ತಿದ್ದರೆ, ಅವುಗಳೊಂದಿಗೆ ಜನ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ಮೇಳದಲ್ಲಿ ಎತ್ತುಗಳ ಮಾರಾಟವೂ ಜೋರಾಗಿತ್ತು. ಕೆಲವರು ಮೆರವಣಿಗೆಯನ್ನೂ ನಡೆಸಿದರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳದಲ್ಲಿ ಪ್ರದರ್ಶಸಿಲಾದ ಹಳ್ಳೀಕಾರ್ ಎತ್ತುಗಳು ಜನರ ಆಕರ್ಷಣೆಯ ಕೇಂದ್ರವಾಗಿತ್ತು