ನಗರದ ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿ ದೇವಸ್ಥಾನದಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದರು
ಬಾಗಲಗುಂಟೆಯಲ್ಲಿ ಅಂಗನವಾಡಿ ಮಕ್ಕಳು ರಾಧಾ–ಕೃಷ್ಣರ ವೇಷ ಧರಿಸಿ ಸಂಭ್ರಮಿಸಿದರು. ಶಾಸಕ ಎಸ್. ಮುನಿರಾಜು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಶಕುಂತಲಾ ದೇವಿ ತೇಜಸ್ವಿನಿ ಸೂರಜ್ ಫೌಂಡೇಷನ್ ಅಧ್ಯಕ್ಷೆ ಸುಜಾತ ಮುನಿರಾಜು ಉಪಸ್ಥಿತರಿದ್ದರು
ಇಸ್ಕಾನ್‌ನಲ್ಲಿ ವಿಶೇಷ ಪೂಜೆ
ಇಸ್ಕಾನ್ ಹರೇಕೃಷ್ಣ ಗಿರಿ ವೈಕುಂಠ ಗಿರಿ ಮತ್ತು ವೈಟ್‌ಫೀಲ್ಡ್‌ನ ಕರ್ನಾಟಕ ವಾಣಿಜ್ಯ ಪ್ರಚಾರ ಸಂಸ್ಥೆಯಲ್ಲಿ (ಕೆಟಿಪಿಒ) ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಹರೇಕೃಷ್ಣ ಗಿರಿಯಲ್ಲಿ ಶ್ರೀಕೃಷ್ಣ–ಬಲರಾಮರಿಗೆ ಅಭಿಷೇಕ ಸೇವೆ ಹೂವಿನ ಅಲಂಕಾರ ಆರತಿ ಛಪ್ಪನ್ನ ಭೋಗ ನೈವೇದ್ಯ ಸೇವೆ ಪುಷ್ಪಾಂಜಲಿ ಅರ್ಚನೆ ಸೇವೆ ಪಲ್ಲಕ್ಕಿ ಉತ್ಸವ ಮತ್ತು ಉಯ್ಯಲೆ ಸೇವೆ ಹಾಗೂ 108 ಭಕ್ಷ್ಯಗಳ ವಿಶೇಷ ನೈವೇದ್ಯ ಮಾಡಲಾಯಿತು. ‘ಕೃಷ್ಣ ಜನ್ಮಾಷ್ಟಮಿ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಹರ್ಷದಿಂದ ಪಾಲ್ಗೊಂಡಿದ್ದರು. ಜಗತ್ತಿನ ವಿವಿಧೆಡೆ ಇರುವ ಭಕ್ತರಿಗಾಗಿ ‘ಸ್ವಾಗತಂ ಕೃಷ್ಣ’ ಡಿಜಿಟಲ್ ವೇದಿಕೆ ಮೂಲಕ ಉತ್ಸವ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು’ ಎಂದು ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧುಪಂಡಿತ ದಾಸ ಹೇಳಿದರು.
ದಾಬಸ್‌ಪೇಟೆಯ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಕ್ಕಳು ರಾಧಾ–ಕೃಷ್ಣ ವೇಷ ಧರಿಸಿ ಸಂಭ್ರಮಿಸಿದರು