ಶನಿವಾರ, ಜುಲೈ 24, 2021
27 °C

ಕೆಎಸ್‌ಆರ್‌ಟಿಸಿ: ಬೆಂಗಳೂರಿನಲ್ಲಿ 15 ಪಿಕ್‌ಅಪ್ ಪಾಯಿಂಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವುದು ಇನ್ನು ಮುಂದೆ ಅನಿವಾರ್ಯ ಅಲ್ಲ.  ನಗರದ 15 ಪಿಕ್‌ಅಪ್‌ ಪಾಯಿಂಟ್‌ಗಳಿಂದಲೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ನವರಂಗ್‌, ಗೋವರ್ಧನ್(ಯಶವಂತಪುರ), ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, 8ನೇ ಮೈಲಿ, ಹೆಬ್ಬಾಳ, ಯಲಹಂಕ, ಕಾರ್ಪೊರೇಷನ್ ಸರ್ಕಲ್, ಟಿನ್‌ ಫ್ಯಾಕ್ಟರಿ, ಕೆ.ಆರ್.ಪುರ, ಐಟಿಐ ಗೇಟ್, ಕಾವೇರಿಭವನ, ಕಲಾಸಿಪಾಳ್ಯ, ನಾಯಂಡಹಳ್ಳಿ ಮತ್ತು ಕೆಂಗೇರಿ ಪಿಕ್‌ಅಪ್‌ ಪ್ಯಾಯಿಂಟ್‌ಗಳಿಂದಲೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತದೆ. ಬಸ್ ಹತ್ತುವ ಮುನ್ನ ಥರ್ಮಲ್ ಸ್ಕ್ಯಾನ್‌ ಮೂಲಕ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು