ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಲಗೇಜ್ ದರವನ್ನು ಶೇ 15ರಷ್ಟು ಹೆಚ್ಚಿಸಿದ್ದು, ಪರಿಷ್ಕೃತ ದರ ಫೆ.16 ರಿಂದ ಜಾರಿಯಾಗಲಿದೆ.

ಸಾರಿಗೆ ಸಂಸ್ಥೆಯ ಡೀಸೆಲ್ ವೆಚ್ಚ, ಸಿಬ್ಬಂದಿ ವೆಚ್ಚ ಜಾಸ್ತಿಯಾಗಿದೆ. ಆರ್ಥಿಕ ಹೊರೆ ತಗ್ಗಿಸಲು ಮತ್ತು ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರ ಅನಿವಾರ್ಯ. ದರ ಪರಿಷ್ಕರಣೆಯು ಪ್ರಯಾಣಿಕರ ಜೊತೆಗಿರುವ ಹಾಗೂ ಪ್ರಯಾಣಿಕ ರಹಿತ ಲಗೇಜುಗಳಿಗೂ ಅನ್ವಯವಾಗಲಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.

ಬಸ್ ಪ್ರಯಾಣದ ಟಿಕೆಟ್ ದರ ಪರಿಷ್ಕರಣೆಯಾದಾಗ ಅದು ಲಗೇಜ್ ದರಗಳಿಗೂ ಅನ್ವಯವಾಗುತ್ತದೆ. ಆದರೆ, 2025ರ ಜನವರಿ 5ರಂದು ಟಿಕೆಟ್ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿದ್ದರೂ, ಲಗೇಜ್ ದರವನ್ನು ಏರಿಕೆ ಮಾಡಿರಲಿಲ್ಲ. 2021ರಲ್ಲಿ ಕೊನೇ ಬಾರಿ ಲಗೇಜ್ ದರ ಪರಿಷ್ಕರಣೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಒಬ್ಬ ಪ್ರಯಾಣಿಕ 30 ಕೆ.ಜಿ. ವರೆಗೆ ಒಯ್ಯುವ ಲಗೇಜುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 30 ಕೆ.ಜಿ.ಗಿಂತ ಅಧಿಕ ಇರುವ ಒಂದು ಬ್ಯಾಗ್ ಅಥವಾ ಮೂಟೆಗೆ ದೂರಕ್ಕೆ ಅನ್ವಯವಾಗುವಂತೆ ಕನಿಷ್ಠ ₹1 ಗರಿಷ್ಠ ₹23 ಹೆಚ್ಚಳವಾಗಲಿದೆ. ಸದ್ಯ ಕನಿಷ್ಠ ದರ ₹ 5 ಹಾಗೂ ಗರಿಷ್ಠ ದರ ₹123 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.