ಶುಕ್ರವಾರ, ಜುಲೈ 30, 2021
21 °C

ಒಕ್ಕಲಿಗ ನಿಗಮ: ಬುಡಕಟ್ಟು ಜಾತಿಗಳ ನಿರ್ನಾಮದ ನಿರ್ಣಯ -ಕುಂಚಿಟಿಗ ಯುವಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಸಣ್ಣ ಜಾತಿಗಳು, ಪಶುಪಾಲನಾ ಬುಡಕಟ್ಟು ಜನಾಂಗಗಳನ್ನು ನಾಶ ಮಾಡುವಂತಹ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ’ ಎಂದು ವಿಶ್ವ ಕುಂಚಿಟಿಗ ಯುವಶಕ್ತಿ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

‘ಪ್ರವರ್ಗ 3ಎ ಅಡಿಯಲ್ಲಿ ಬರುವ ಒಕ್ಕಲಿಗ ಜಾತಿಯನ್ನು ಪ್ರಧಾನವಾಗಿ ಬಿಂಬಿಸಿ, ಪ್ರವರ್ಗ 3ರ ಅಡಿಯಲ್ಲಿ ಬರುವ ಕುಂಚಿಟಿಗ ಜಾತಿಯನ್ನು ಒಕ್ಕಲಿಗರ ಉಪಜಾತಿ ಎಂದು ಹೇಳಲಾಗಿದೆ. ಇದು ಅತ್ಯಂತ ಖಂಡನೀಯ’ ಎಂದು ಸಂಘಟನೆ ಹೇಳಿದೆ.

‘ಕುಂಚಿಟಿಗರಲ್ಲಿ ಇಂದಿಗೂ ಬುಡಕಟ್ಟು ಆಚರಣೆಗಳು ಜೀವಂತವಾಗಿವೆ. ರಾಜ್ಯಸರ್ಕಾರ ಕೂಡಲೇ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಯಥಾವತ್‌ ಜಾರಿ ಮಾಡಬೇಕು. ಒಕ್ಕಲಿಗ ಉಪಜಾತಿ ಎನ್ನುವ ಆದೇಶವನ್ನು ರದ್ದು ಮಾಡಬೇಕು. ಇದಕ್ಕೆ ತಪ್ಪಿದರೆ ರಾಜ್ಯದಾದ್ಯಂತ ಹೋರಾಟ ನಡೆಸುವುದರ ಜೊತೆಗೆ, ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು