ಲಲಿತಕಲಾ ಅಕಾಡೆಮಿಯ ಹೆಸರನ್ನು ಬದಲಿಸುವಂತೆ ಅಕಾಡೆಮಿಯ ಅಧ್ಯಕ್ಷರು ಹಾಗೂ ಹಿರಿಯ ಕಲಾವಿದರು ವೇದಿಕೆಯಲ್ಲಿದ್ದ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಹೆಸರು ಬದಲಾಯಿಸಲು ನಮ್ಮ ವಿರೋಧ ಇಲ್ಲ. ಅಕಾಡೆಮಿ ಹಾಗೂ ಸದಸ್ಯರು ಒಕ್ಕೊರಲಿನಿಂದ ಒಂದು ಹೆಸರು ಶಿಫಾರಸು ಮಾಡಿದರೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು’ ಎಂದರು.