ಬೆಂಗಳೂರು: ಕಲಾವಿದರಾದ ಮೈಸೂರಿನ ಎಸ್.ಎಂ.ಜಂಬುಕೇಶ್ವರ, ಧಾರವಾಡದ ಮಧು ದೇಸಾಯಿ, ಉಡುಪಿಯ ಉಪಾಧ್ಯಾಯ ಮೂಡುಬೆಳ್ಳೆ ಅವರಿಗೆ 2018ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

47ನೇ ವಾರ್ಷಿಕ ಕಲಾಪ್ರದರ್ಶನ ಬಹುಮಾನವನ್ನು ಬಾಗಲಕೋಟೆಯ ಇಂದ್ರಕುಮಾರ.ಬಿ.ದಸ್ತೇನವರ, ಹಾವೇರಿಯ ಕರಿಯಪ್ಪ ಹಂಚಿನಮನಿ, ಬೆಳಗಾವಿಯ ಶಂಕರ ಬಿ.ಲೋಹಾರ, ಬೆಂಗಳೂರಿನ ಆರ್.ವೆಂಕಟರಾಮನ್, ಬಾಗೂರು ಮಾರ್ಕಾಂಡೇಯ, ಶಿವಮೊಗ್ಗದ ಕೋಟೆಗದ್ದೆ ಎಸ್.ರವಿ, ಕಲಬುರ್ಗಿಯ ಡಾ.ಸುಬ್ಬಯ್ಯ ಎಂ.ನೀಲಾ, ಶ್ರೀಶೈಲ ಗುಡೇದ, ಮಂಡ್ಯದ ವಿ.ಇ. ಅಕ್ಷಯ್ ಕುಮಾರ್, ಹುಬ್ಬಳ್ಳಿಯ ಗಣೇಶ ಎಸ್.ಸಾಬೋಜಿ ಅವರಿಗೆ ನೀಡಿ ಗೌರವಿಸಲಾಯಿತು.

ಗೌರವ ಪ್ರಶಸ್ತಿಗೆ ₹ 50 ಸಾವಿರ ಹಾಗೂ ಕಲಾಪ್ರದರ್ಶನ ಬಹುಮಾನ ಪಡೆದ ಹತ್ತು ಕಲಾವಿದರಿಗೆ ₹25 ಸಾವಿರ ನಗದು ಬಹುಮಾನ ನೀಡಲಾಯಿತು.

ಸಾಹಿತಿ ಚಂದ್ರಶೇಖರ ಕಂಬಾರ ಅವರು ಮಾತನಾಡಿ, ‘ಚಿತ್ರಗಳನ್ನು ನೋಡಿ ಕೂಡ ನಾನು ಪದ್ಯ ಬರೆದಿದ್ದೇನೆ. ಎಲ್ಲಾ ಪ್ರಕಾರದ ಕಲೆಗೂ ಒಂದೇ ರೀತಿಯ ಮನ್ನಣೆ ಸಿಗಬೇಕು. ಬ್ರಿಟೀಷರು ಭಾರತಕ್ಕೆ ಬರುವ ಮೊದಲು ಇದೇ ವ್ಯವಸ್ಥೆ ಇತ್ತು. ಆದರೆ ಆ ನಂತರ ಕಲೆ, ಸಾಹಿತ್ಯ ಬೇರೆ, ಬೇರೆ ಎನ್ನುವ ಮನಸ್ಥಿತಿ ಹುಟ್ಟಿಕೊಂಡಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರಶಸ್ತಿ ಪಡೆದವರು ಚಿತ್ರಕಲೆಯ ಮೂಲಕ ಪ್ರೌಢಭಾಷೆಯನ್ನು ಬಳಸಿದ್ದಾರೆ. ಕಲಾವಿದರ ಚಿತ್ರಗಳನ್ನು ನೋಡಿದಾಗ ಆಶಾಭಾವನೆ ಮೂಡಿಬರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.