ಬೆಂಗಳೂರು: ಕೆಲಸಕ್ಕಿದ್ದ ಕಂಪನಿಯ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ ಆರೋಪದಡಿ ಚಿನ್ನಬಥಿನಿ ಜಾನ್ ಪೌಲ್ (35) ಎಂಬುವರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ತೆಲಂಗಾಣದ ಚಿನ್ನಬಥಿನಿ, ಕೆಲಸ ಅರಸಿ ನಗರಕ್ಕೆ ಬಂದು ಭದ್ರತಾ ಏಜೆನ್ಸಿಯೊಂದಕ್ಕೆ ಸೇರಿದ್ದ. ಈತನನ್ನು ಕಾಡುಬಿಸನಹಳ್ಳಿ ಬಳಿಯ ಒರ‍್ಯಾಕಲ್ ಇಂಡಿಯಾ ಕಂಪನಿಯ ಭದ್ರತಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಅದೇ ಕಂಪನಿಯಲ್ಲಿದ್ದ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಯಿಂದ ವಿವಿಧ ಕಂಪನಿಗಳ 67 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಕದ್ದ ಲ್ಯಾಪ್‌ಟಾಪ್ ಮಾರಾಟದಿಂದ ಬಂದಿದ್ದ ಹಣದಲ್ಲಿ ಖರೀದಿಸಿದ್ದ ಚಿನ್ನಾಭರಣ ಹಾಗೂ ಕಾರನ್ನೂ ಸುಪರ್ದಿಗೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ಒಎಲ್‌ಎಕ್ಸ್, ಫೇಸ್‌ಬುಕ್‌ನಲ್ಲಿ ಮಾರಾಟ: ‘ಕದ್ದ ಲ್ಯಾಪ್‌ಟಾಪ್‌ಗಳ ಫೋಟೊವನ್ನು ಒಎಲ್‌ಎಕ್ಸ್ ಜಾಲತಾಣ ಹಾಗೂ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಕಂಪನಿ ಬಳಕೆ ಮಾಡಿದ ಲ್ಯಾಪ್‌ಟಾಪ್ ಎಂಬುದಾಗಿ ಹೇಳಿ ಗ್ರಾಹಕರಿಗೆ ಮಾರುತ್ತಿದ್ದ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.