ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿಬಿದ್ದ ಬಾಟಲಿ: ವಿಧಾನಸೌಧ ದ್ವಾರದಲ್ಲಿ ಚೆಲ್ಲಾಡಿದ ಮದ್ಯ

Last Updated 7 ಮಾರ್ಚ್ 2023, 20:00 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ಒಳಗೆ ತೆಗೆದುಕೊಂಡು ಹೊರಟಿದ್ದ ಮದ್ಯದ ಬಾಟಲಿಗಳು ಪ್ರವೇಶ ದ್ವಾರದಲ್ಲಿಯೇ ಕೈ ಜಾರಿ ಬಿದ್ದಿದ್ದು, ಅದನ್ನು ಸಾಗಿಸುತ್ತಿದ್ದ ವ್ಯಕ್ತಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮಂಗಳವಾರ ನಡೆದಿರುವ ಘಟನೆ ಸಂಬಂಧ ಭದ್ರತಾ ಸಿಬ್ಬಂದಿ, ವಿಧಾನಸೌಧ ಠಾಣೆಗೆ ಮಾಹಿತಿ ನೀಡಿದ್ದಾರೆ. ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಯಾರು? ವಿಧಾನಸೌಧದ ಒಳಗೆ ಯಾರಿಗಾಗಿ ಮದ್ಯ ತೆಗೆದುಕೊಂಡು ಹೊರಟಿದ್ದರು? ಇದರ ಹಿಂದೆ ಬೇರೆ ಏನಾದರೂ ಉದ್ದೇಶವಿದೆಯಾ? ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

‘30 ವರ್ಷದಿಂದ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು, ಚೀಲವನ್ನು ಹಿಡಿದುಕೊಂಡು ಪಶ್ಚಿಮ ಪ್ರವೇಶ ದ್ವಾರದ ಮೂಲಕ ವಿಧಾನಸೌಧದ ಒಳಗೆ ಹೊರಟಿದ್ದರು. ಪ್ರವೇಶ ದ್ವಾರದ ಮೆಟ್ಟಿಲು ಸಮೀಪದಲ್ಲಿ ವ್ಯಕ್ತಿ ಚೀಲದ ಸಮೇತ ಜಾರಿಬಿದ್ದಿದ್ದರು. ಮದ್ಯದ ಬಾಟಲಿಗಳು ಒಡೆದಿದ್ದವು. ರಸ್ತೆಯಲ್ಲಿಯೇ ಮದ್ಯವೆಲ್ಲ ಚೆಲ್ಲಾಡಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಚೀಲವನ್ನು ಸ್ಥಳದಲ್ಲೇ ಬಿಟ್ಟು ವ್ಯಕ್ತಿ ಪರಾರಿಯಾಗಿದ್ದಾರೆ. ಚೀಲ ಹಾಗೂ ಮದ್ಯದ ಬಾಟಲಿಗಳನ್ನು ಭದ್ರತಾ ಸಿಬ್ಬಂದಿ ತೆರವು ಮಾಡಿದ್ದಾರೆ. ಚೀಲವನ್ನು ಪರೀಕ್ಷಿಸದೇ ವ್ಯಕ್ತಿಯನ್ನು ಒಳಗೆ ಬಿಟ್ಟಿರುವ ಭದ್ರತಾ ಸಿಬ್ಬಂದಿ ವೈಫಲ್ಯವೂ ಎದ್ದು ಕಾಣುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT