ಭಾನುವಾರ, ಅಕ್ಟೋಬರ್ 20, 2019
21 °C

ಬೆಂಗಳೂರು ಸಾಹಿತ್ಯ ಉತ್ಸವ ನ.9ರಿಂದ

Published:
Updated:
Prajavani

ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 8ನೇ ಆವೃತ್ತಿಯನ್ನು ನ.9 ಮತ್ತು 10ಕ್ಕೆ ಕುಮಾರಕೃಪಾ ರಸ್ತೆಯ ಲಲಿತ್ ಅಶೋಕ್‌ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದೆ.

‘ವಿಶ್ವದ ಸುಮಾರು 200ಕ್ಕೂ ಹೆಚ್ಚು ಪ್ರಮುಖ ಲೇಖಕರು ಮತ್ತು ಭಾಷಣಕಾರರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣ ಮತ್ತು ಸಂವಾದವೂ ನಡೆಯಲಿದೆ. ಪುಸ್ತಕ ಓದುವಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ’ ಎಂದು ಸಂಘಟಕರು ತಿಳಿಸಿದ್ದಾರೆ.

‘ಎರಡು ದಿನಗಳ ಉತ್ಸವದಲ್ಲಿ 150ಕ್ಕೂ ಅಧಿಕ ಗೋಷ್ಠಿಗಳು ನಡೆಯಲಿವೆ. ಏಕಕಾಲದಲ್ಲಿ 6 ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ವಿವಿಧ ವಿಷಯಗಳ ಮೇಲೆ ಆಯೋಜಿಸಲಾಗುತ್ತದೆ.‌ ವಿವಿಧ ಭಾಷೆಗಳ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ’ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. ಈಗಾಗಾಲೇ ಉತ್ಸವಕ್ಕೆ ನೋಂದಣಿ ಆರಂಭವಾಗಿದೆ.

ಮಾಹಿತಿಗೆ: www.bangaloreliteraturefestival.org

Post Comments (+)