ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಿಎಸ್ ಗ್ಲೋಬಲ್ ಆಸ್ಪತ್ರೆ: ಯಕೃತ್ತು ವಿನಿಮಯ

Last Updated 12 ಆಗಸ್ಟ್ 2020, 21:55 IST
ಅಕ್ಷರ ಗಾತ್ರ

ಬೆಂಗಳೂರು: ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಇಬ್ಬರು ದಂಪತಿಗಳು ಯಕೃತ್ತುಗಳನ್ನು ವಿನಿಮಯ ಮಾಡಿಕೊಂಡಿದ್ದು, ಕ್ಲಿಷ್ಟಕರ ಯಕೃತ್ತು ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಯಕೃತ್ತು ಕಸಿ ಮಾಡಲಾಗಿದೆ.

ಕಲ್ಲಿಕೋಟೆಯ 58 ವರ್ಷದ ವ್ಯಾಪಾರಿ ಪ್ರದೀಪ್ ಅವರು ಜೂ.25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಯಕೃತ್ತಿನಲ್ಲಿ ಗಡ್ಡೆ ಬೆಳೆದಿತ್ತು. ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿತ್ತು. ಹೀಗಾಗಿ ಅಲ್ಲಿನ ವೈದ್ಯರು ಕಸಿ ಮಾಡಲು ನಿರ್ಧರಿಸಿದರು. ವ್ಯಕ್ತಿಯ ಪತ್ನಿ ಯಕೃತ್ತು ದಾನ ಮಾಡಲು ಮುಂದೆ ಬಂದರು. ಆದರೆ, ಅವರ ಯಕೃತ್ತು ಪತಿಗೆ ಹೊಂದಿಕೆಯಾಗಲಿಲ್ಲ.

ವೈದ್ಯರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದ ಆಂಧ್ರಪ್ರದೇಶದ 50 ವರ್ಷದ ಶ್ರೀನಿವಾಸಲು ಅವರನ್ನು ಸಂಪರ್ಕಿಸಿದರು. ಅವರು ಕೂಡ ಯಕೃತ್ತು ದಾನಿಗಾಗಿ ಎದುರು ನೋಡುತ್ತಿದ್ದರು. ಆಸ್ಪತ್ರೆಯ ಯಕೃತ್ತು ಕಸಿ ವಿಭಾಗದ ಹಿರಿಯ ಸಲಹೆಗಾರ ಡಾ. ವೇಣುಗೋಪಾಲ್ ಬಿ. ಪಿಳ್ಳೈ ನೇತೃತ್ವದ ವೈದ್ಯರ ತಂಡವು 58 ವರ್ಷದ ವ್ಯಕ್ತಿಗೆ 50 ವರ್ಷದ ವ್ಯಕ್ತಿಯ ಪತ್ನಿಯ ಯಕೃತ್ತನ್ನು ಹಾಗೂ 50 ವರ್ಷದ ವ್ಯಕ್ತಿಗೆ 58 ವರ್ಷದ ವ್ಯಕ್ತಿಯ ಪತ್ನಿಯ ಯಕೃತ್ತನ್ನು ಕಸಿ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT