ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಸ್ಕೃತಿ ಕಡೆಗಣನೆ ಮಾಡಿರುವ ಪಠ್ಯಪುಸ್ತಕ ಮಕ್ಕಳಿಗೆ ಬೇಡ: ಪ್ರಕಾಶಮೂರ್ತಿ

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟೀಕೆ
Last Updated 9 ಜೂನ್ 2022, 20:29 IST
ಅಕ್ಷರ ಗಾತ್ರ

ಬೆಂಗಳೂರು: ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತಗಳ ಪರಿಷ್ಕೃತ ಪಠ್ಯಗಳಲ್ಲಿ ಅಕ್ಕಮಹಾದೇವಿ, ಕನಕದಾಸರು, ಪುರಂದರದಾಸರು ಮತ್ತು ಸಂತ ಶಿಶುನಾಳ ಶರೀಫರ ವಿವರಗಳನ್ನು ತೆಗೆದುಹಾಕಿರುವುದು ನಾಡು–ನುಡಿ, ಸಂಸ್ಕೃತಿಗೆ ಮಾಡಿದ ಘೋರ ಅವಮಾನ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಟೀಕಿಸಿದ್ದಾರೆ.

ಬರಗೂರರ ಸಮಿತಿಯ ಪಠ್ಯ ಪುಸ್ತಕಗಳನ್ನು ಕೂಡಲೇ ಮಕ್ಕಳಿಗೆ ವಿತರಿಸಬೇಕೆಂದು ಅವರು ಸರ್ಕಾರವನ್ನು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

ಅಕ್ಕಮಹಾದೇವಿ, ಬಸವಣ್ಣನವರುವಚನಗಳ ಮೂಲಕ ಜಾಗೃತಿ ಮೂಡಿಸಿದವರು. ಕನಕದಾಸರು, ಪುರಂದರದಾಸರು, ಸಂತ ಶಿಶುನಾಳ ಶರೀಫರ ವಿಚಾರಧಾರೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವುದು ಬೇಡವೇ’ ಎಂದು ಪ್ರಶ್ನಿಸಿದ್ದಾರೆ.

ನಮ್ಮ ರಾಜ್ಯದ ಪಠ್ಯಪುಸ್ತಕಗಳಲ್ಲಿಯೂ ನಮ್ಮ ಇತಿಹಾಸ, ಸಂಸ್ಕೃತಿಗಳಿಗಿಂತಲೂ ಉತ್ತರ ಭಾರತದ ಸಂತರು ಮತ್ತು (ಕಾರ್ಕೋಟ, ಅಹೋಮ್ ಇತ್ಯಾದಿ) ಸಂತತಿಗಳಿಗೆ ಇನ್ನಿಲ್ಲದ ಪ್ರಾತಿನಿಧ್ಯ ನೀಡುವುದು ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸುತ್ತದೆ. ರೋಹಿತ್ ಚಕ್ರತೀರ್ಥ ಅವರಂತಹ ಮನಃಸ್ಥಿತಿಯವರು ಮಾಡಿರುವ ಇಂತಹ ವಂಚನೆಯನ್ನು ಕನ್ನಡಿಗರು ಎಂದೂ ಸಹಿಸುವುದಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT