ಬೆಂಗಳೂರು: ಒಂದು ಸಾವಿರ ವರ್ಷಗಳ ನಂತರ ಪತ್ತೆಯಾದ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅವಶೇಷಗಳನ್ನು ಮಹಾಶಿವರಾತ್ರಿಯ ಸಮಯದಲ್ಲಿ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಅನಾವರಣಗೊಳಿಸಿದರು ಎಂದು ಆರ್ಟ್ ಆಫ್ ಲಿವಿಂಗ್ ಪ್ರಕಟಣೆ ನೀಡಿದೆ.

ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಶನಲ್ ಸೆಂಟರ್ನ ವೈಭವದ ವಿಶಾಲಾಕ್ಷಿ ಮಂಟಪದಲ್ಲಿ ನಡೆದ ಮಹಾ ಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. 180 ದೇಶಗಳ ಭಕ್ತರು ಇದನ್ನು ಆನ್ಲೈನ್ ಮೂಲಕ ವೀಕ್ಷಿಸಿದರು.

‘ಶಿವನು ಕಾಲಾತೀತ, ಆದರೂ ಅವನು ಮಹಾಕಾಲ. ಮಹಾಕಾಲ್ ಎಂಬುದು ಶಿವನ ಅತ್ಯಂತ ಪೂಜ್ಯ ರೂಪ. ಸಮಯವು ಮನಸ್ಸಿಗೆ ಬದ್ಧವಾಗಿದೆ. ಕಾಲವನ್ನು ಮೀರುವುದೇ ಮಹಾಕಾಲ’ ಎಂದು ರವಿಶಂಕರ್ ಗುರೂಜಿ ವಿವರಿಸಿದರು.

‘12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದೇ ಸೋಮನಾಥ ಜ್ಯೋತಿರ್ಲಿಂಗವಾಗಿದೆ. ಸೋಮನಾಥ ದೇವಾಲಯ ಮತ್ತು ಅದರೊಳಗಿನ ಜ್ಯೋತಿರ್ಲಿಂಗವನ್ನು ಘಜ್ನಿ ಮಹಮ್ಮದ್ ನಾಶಪಡಿಸಿದಾಗ, ಕೆಲವು ಬ್ರಾಹ್ಮಣರು ಒಡೆದ ಚೂರುಗಳನ್ನು ತಮಿಳುನಾಡಿಗೆ ಕೊಂಡೊಯ್ದು ಸಣ್ಣ ಶಿವಲಿಂಗವಾಗಿ ರೂಪಿಸಿದರು. ಅವರ ತಲೆಮಾರಿನವರು ಸಾವಿರ ವರ್ಷಗಳ ಕಾಲ ರಹಸ್ಯವಾಗಿ ಪೂಜಿಸಿದರು. ಒಂದು ಶತಮಾನದ ಹಿಂದೆ, ಅವರನ್ನು ಸಂತ ಪ್ರಣವೇಂದ್ರ ಸರಸ್ವತಿ ಅವರು ಕಂಚಿ ಶಂಕರಾಚಾರ್ಯ ಸ್ವಾಮಿ ಚಂದ್ರಶೇಖರೇಂದ್ರ ಸರಸ್ವತಿಯವರ ಬಳಿಗೆ ಕರೆದೊಯ್ದಾಗ ಇನ್ನೂ ನೂರು ವರ್ಷ ಅವುಗಳನ್ನು ಮರೆಮಾಡಲು ಸೂಚಿಸಿದ್ದರು’ ಎಂದು ಮಾಹಿತಿ ನೀಡಿದರು.

ಆಶ್ರಮದೊಳಗಿನ ಪೂಜ್ಯ ಶಿವ ದೇವಾಲಯದಲ್ಲಿ ಲಕ್ಷಾಂತರ ಜನರು ಅಭಿಷೇಕವನ್ನು ಅರ್ಪಿಸುವುದರೊಂದಿಗೆ ಮಹಾಶಿವರಾತ್ರಿ ದಿನ ಪ್ರಾರಂಭವಾಯಿತು. ಭಕ್ತರಿಗೆ ನಿರಂತರವಾಗಿ ಪ್ರಸಾದ ನೀಡಲಾಯಿತು. ರಾತ್ರಿ ಶಿವಧ್ಯಾನದಲ್ಲಿ ಭಕ್ತರು ತೊಡಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.