ಭಾನುವಾರ, ಏಪ್ರಿಲ್ 2, 2023
31 °C

ಬಿಪಿಎಲ್‌: ಸಾವಿರ ಮಂದಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (ಬಿಪಿಎಲ್) ಸಾವಿರ ಮಂದಿಗೆ ನಗರದಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ವಿತರಿಸಿದೆ.

ಈ ಕಾರ್ಯಕ್ಕೆ ನಾರಾಯಣ ಹೃದಯಾಲಯ, ಸರ್ಕಾರೇತರ ಸಂಸ್ಥೆ ಯಾದ ಥನಲ್, ಕರ್ನಾಟಕ ಬೆಂಗಾಲಿ ಸ್ವರ್ಣ ಶಿಲ್ಪಿ ಅಸೋಸಿಯೇಷನ್ ಹಾಗೂ ವಿಶ್ವಕರ್ಮಾ ಸೇವಾ ಸಮಿತಿ ಸಹಕಾರ ನೀಡಿವೆ.

‘ಕೋವಿಡ್ ಮೂರನೇ ಅಲೆ ಯನ್ನು ಎದುರಿಸಬೇಕಾದರೆ ದೇಶದ ಜನತೆ ಲಸಿಕೆ ಪಡೆದುಕೊಳ್ಳಬೇಕು. ರೋಗನಿರೋಧಕ ಶಕ್ತಿ ವೃದ್ಧಿಗೆ ಲಸಿಕೆ ಸಹಕಾರಿ. ಹಾಗಾಗಿ, ದುರ್ಬಲ ವರ್ಗದವರಿಗೆ ಲಸಿಕೆ ಪಡೆಯಲು ನೆರವಾಗುತ್ತಿದ್ದೇವೆ. ಸಮಾಜದ ಆರೋಗ್ಯ ಮತ್ತು ಯೋಗಕ್ಷೇಮ ಕಾಪಾಡಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ’ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹ್ಮದ್ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು