ಬೆಂಗಳೂರು: ಪರಿಮಳ ಗೆಳೆಯರ ಬಳಗ ನೀಡುವ ‘ಪರಿಮಳ ಪ್ರಶಸ್ತಿ’ಗೆ ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಸೇರಿ 16 ಮಂದಿ ಆಯ್ಕೆಯಾಗಿದ್ದಾರೆ.

ನ್ಯಾಯಾಂಗ ಕ್ಷೇತ್ರದಿಂದ ಪಿ.ಎಸ್. ದಿನೇಶ್ ಕುಮಾರ್, ಶಿಕ್ಷಣ ಕ್ಷೇತ್ರದಿಂದ ವೂಡೇ ಪಿ. ಕೃಷ್ಣ, ಸಾಹಿತ್ಯ ಕ್ಷೇತ್ರದಿಂದ ಮಲ್ಲೇಪುರಂ ಜಿ. ವೆಂಕಟೇಶ್, ಪತ್ರಿಕೋದ್ಯಮ ಕ್ಷೇತ್ರದಿಂದ ರವೀಂದ್ರ ಭಟ್ಟ, ವೇದಾಂತ ಕ್ಷೇತ್ರದಿಂದ ಶ್ರೀಹರಿ ವಾಳ್ವೇಕರ್ ಆಚಾರ್ಯ, ದಾಸ ಸಾಹಿತ್ಯ ಸಂಶೋಧನೆಗೆ ಸುಳಾದಿ ಹನುಮೇಶಾಚಾರ್ಯ, ತಿಳಿಹಾಸ್ಯ ಹಾಗೂ ಕನ್ನಡ ಪರಿಚಾರಿಕೆಗೆ ಹಿರೇಮಗಳೂರು ಕಣ್ಣನ್ ಆಯ್ಕೆಯಾಗಿದ್ದಾರೆ.

ವಿಜ್ಞಾನ ಕ್ಷೇತ್ರದಿಂದ ವೈ.ಎಲ್. ಮಧುಸೂದನ್, ಸುಗಮ ಸಂಗೀತ ಕ್ಷೇತ್ರದಿಂದ ಪುತ್ತೂರು ನರಸಿಂಹ ನಾಯಕ್, ವೇಣುವಾದನಕ್ಕೆ ಪ್ರವೀಣ್ ಗೋಡ್ಕಿಂಡಿ, ಮೃದಂಗ ವಾದನಕ್ಕೆ ವಿ.ಕೃಷ್ಣ, ವೈದ್ಯಕೀಯ ಕ್ಷೇತ್ರಕ್ಕೆ ಡಾ.ಎಚ್.ಎನ್. ಸುಬ್ರಹ್ಮಣ್ಯ, ಡಾ.ಬಿ. ರವಿಶಂಕರ್ ಭಟ್, ಡಾ. ಗಿರಿಧರ ಕಜೆ, ಯೋಗ ಕ್ಷೇತ್ರಕ್ಕೆ ಎಚ್.ಎನ್. ಅರುಣ್ ಹಾಗೂ ಸಮಾಜ ಸೇವೆಗೆ ಶ್ರೀಪಾದರಾವ್ ದೇವನಹಳ್ಳಿ ಆಯ್ಕೆಯಾಗಿದ್ದಾರೆ.

48ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಹಿತ್ಯ, ಶಿಕ್ಷಣ, ನ್ಯಾಯಾಂಗ, ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದೇ 20ರಂದು ಸಂಜೆ 5.45ಕ್ಕೆ ಇಲ್ಲಿನ ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಬಳಗ ತಿಳಿಸಿದೆ.

ಈ ವೇಳೆ ದಾಸ ಸಾಹಿತ್ಯ ಸಂಶೋಧಕ, ಲೇಖಕ ಎಸ್. ಜಯಸಿಂಹ ಅವರು ರಚಿಸಿರುವ`ಶ್ರೀಸುಮತೀಂದ್ರ ದರ್ಶನ’ ಎಂಬ ಸಂಶೋಧನಾತ್ಮಕ ಕೃತಿಯನ್ನು ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಬಿಡುಗಡೆ ಮಾಡುತ್ತಾರೆ. ಶ್ರೀಪಾದರಾಜ ಮಠಾಧೀಶ ಸುಜಯನಿಧಿತೀರ್ಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುತ್ತಾರೆ. ಪುತ್ತೂರು ನರಸಿಂಹ ನಾಯಕ್ ಮತ್ತು ವೃಂದದವರಿಂದ `ಹರಿದಾಸ ವಾಣಿ’ ಕಾರ್ಯಕ್ರಮವೂ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.