ಶುಕ್ರವಾರ, ಸೆಪ್ಟೆಂಬರ್ 30, 2022
24 °C

ದುಶ್ಚಟಕ್ಕಾಗಿ 60 ಸೈಕಲ್ ಕದ್ದು ಮಾರಾಟ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಸಾರ್ವಜನಿಕ ಸ್ಥಳ ಹಾಗೂ ಮನೆಗಳ ಮುಂದೆ ನಿಲ್ಲಿಸುತ್ತಿದ್ದ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ನವೀನ್ (38) ಎಂಬುವರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನವೀನ್ ಕೆಲಸಕ್ಕೆಂದು ನಗರಕ್ಕೆ ಬಂದಿದ್ದ. ಕಾಡುಬೀಸನಹಳ್ಳಿಯಲ್ಲಿ ಶೆಡ್‌ನಲ್ಲಿ ವಾಸವಿದ್ದ. ಈತನನ್ನು ಬಂಧಿಸಿ, ₹ 9 ಲಕ್ಷ ಮೌಲ್ಯದ 60 ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎ. ನಾರಾಯಣಪುರ ಕೆರೆ ಬಳಿ ಆಗಸ್ಟ್ 11ರಂದು ನಿಲ್ಲಿಸಿದ್ದ ಸೈಕಲ್‌ ಕಳ್ಳತನವಾಗಿತ್ತು. ಈ ಬಗ್ಗೆ ಮಾಲೀಕರು ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದು ತಿಳಿಸಿದರು.

ಲಾಕ್‌ ಕತ್ತರಿಸಿ ಕಳ್ಳತನ: ‘ನಗರದಲ್ಲಿ ಹಗಲು–ರಾತ್ರಿ ಸುತ್ತಾಡುತ್ತಿದ್ದ ಆರೋಪಿ ಸೈಕಲ್‌ಗಳನ್ನು ಗುರುತಿಸುತ್ತಿದ್ದ. ಕಟ್ಟಿಂಗ್ ಪ್ಲೇಯರ್‌ನಿಂದ ಲಾಕ್‌ ಕತ್ತರಿಸಿ ಸೈಕಲ್‌ಗಳನ್ನು ಕದ್ದೊಯ್ಯುತ್ತಿದ್ದ. ಇದನ್ನೇ ವೃತ್ತಿ ಮಾಡಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ವೈಟ್‌ಫೀಲ್ಡ್ ಹಾಗೂ ಸುತ್ತಮುತ್ತ ಲಿನ ಕಂಪನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಆರೋಪಿ ಪರಿಚಯ ಮಾಡಿಕೊಂಡಿದ್ದ. ಕದ್ದ ಸೈಕಲ್‌ಗಳನ್ನು ಸಿಬ್ಬಂದಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದ. ಬಂದ ಹಣವನ್ನು ದುಶ್ಚಟ ಹಾಗೂ ಐಷಾ ರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದ’ ಎಂದು ತಿಳಿಸಿದರು.

‘ಎಚ್‌ಎಎಲ್‌, ಮಾರತ್ತಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಬೆಳ್ಳಂದೂರು, ಮಹದೇವಪುರ, ಕೆ.ಆರ್.ಪುರ, ಕೋರ ಮಂಗಲ, ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿ ಯಲ್ಲಿ ಆರೋಪಿ ಸೈಕಲ್ ಕಳ್ಳತನ ಮಾಡಿರುವ ಮಾಹಿತಿ ಇದೆ. ಕೆಲವರು ಮಾತ್ರ ದೂರು ನೀಡಿದ್ದು, ಬಹುತೇಕರು ದೂರು ಕೊಟ್ಟಿಲ್ಲ. ಸೈಕಲ್ ಮಾಲೀಕರ ಪತ್ತೆ ಕೆಲಸವೂ ನಡೆಯುತ್ತಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು