ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಸ್ವಯಂಸೇವಕರಿಗೆ ಧೈರ್ಯ ತುಂಬಿದ ಮಣಿವಣ್ಣನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ‘ಕೊರೊನಾಗೆ ತಡೆಯೊಡ್ಡಲು ಸ್ವಯಂಸೇವಕರು ಸೈನಿಕರಂತೆ ಕರ್ತವ್ಯ ನಿರ್ವಹಿಸಬೇಕು’ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಕೋವಿಡ್ ಉಸ್ತುವಾರಿ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಸಲಹೆ ನೀಡಿದರು.

ಗುರುವಾರ ಬೊಮ್ಮನಹಳ್ಳಿ ವಲಯದ ಸಿಂಗಸಂದ್ರ ವಾರ್ಡ್‌ನಲ್ಲಿ ಕೋವಿಡ್ ಪರೀಕ್ಷೆ ಪ್ರಗತಿಯನ್ನು ಖುದ್ದು ಮನೆಗಳಿಗೆ ತೆರಳಿ ಪರೀಕ್ಷಿಸಿ ಮಾತನಾಡಿದರು.

ಈ ವಲಯದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಕೋವಿಡ್ ಪರೀಕ್ಷೆ ಮಾಡಲು ವಾರ್ಡ್ ಮಟ್ಟದಲ್ಲಿ ಕೋವಿಡ್ ವಾರ್ ರೂಂ ತೆರೆಯಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಜೊತೆಯಲ್ಲಿ ಪರೀಕ್ಷೆ ಮಾಡಲು ಉತ್ಸಾಹಿ ಯುವಕ, ಯುವತಿಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಮುಂದೆ ಬಂದಲ್ಲಿ ಅವರಿಗೆ ವಾಹನ ಹಾಗೂ ಊಟದ ವ್ಯವಸ್ಥೆಯ ಜೊತೆಗೆ ತಿಂಗಳಿಗೆ ₹20 ಸಾವಿರ ಸಂಭಾವನೆಯನ್ನೂ ನೀಡಲಾಗುತ್ತದೆ ಎಂದರು.

ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ರಾಮಕೃಷ್ಣ ‘ಬೊಮ್ಮನಹಳ್ಳಿಯ 16 ವಾರ್ಡ್‍ಗಳಲಿ 16 ಕೋವಿಡ್ ವಾರ್ ಸೆಂಟರ್ ತೆರೆಯಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು