ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಧರಿಸದವರಿಗೆ ದಂಡ ಮಾರ್ಷಲ್‌ಗಳಿಗೂ ಅಧಿಕಾರ

Last Updated 9 ಜೂನ್ 2020, 21:47 IST
ಅಕ್ಷರ ಗಾತ್ರ

ಬೆಂಗಳೂರು: ಮುಖಗವಸು (ಮಾಸ್ಕ್‌) ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರಿಗೆ ದಂಡ ವಿಧಿಸುವ ಅಧಿಕಾರವನ್ನು ಬಿಬಿಎಂಪಿಯ ಮಾರ್ಷಲ್‌ಗಳಿಗೂ ನೀಡಲಾಗಿದೆ. ಈ ಕುರಿತು ರಾಜ್ಯಪತ್ರದಲ್ಲಿ ಸೋಮವಾರ ಅಧಿಸೂಚನೆ ಪ್ರಕಟವಾಗಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಐದಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸ ಮಾಡುವ ಕಚೇರಿಗಳಲ್ಲಿ ಕೋವಿಡ್‌ -19 ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದನ್ನು ಬಿಬಿಎಂಪಿ ಕಡ್ಡಾಯ ಮಾಡಿದೆ. ಇದನ್ನು ಪಾಲಿಸದವರಿಗೆ ₹200 ದಂಡ ವಿಧಿಸಲಾಗುತ್ತಿದೆ.

ಸುರಕ್ಷತಾ ಕ್ರಮವಾಗಿ ಮೂಗು ಹಾಗೂ ಬಾಯಿಯನ್ನು ಮುಚ್ಚಲು ಬಟ್ಟೆಯನ್ನು ಸುತ್ತಿಕೊಂಡರೆ ಅದನ್ನೂ ಮಾಸ್ಕ್‌ ಎಂದೇ ಪರಿಗಣಿಸಲಾಗುತ್ತದೆ. ಮನೆಯಲ್ಲೇ ಬಟ್ಟೆಯಲ್ಲಿ ತಯಾರಿಸಿದ ಮುಖಗವಸನ್ನೂ ಸಾರ್ವಜನಿಕರು ಧರಿಸಬಹುದು. ಸ್ಕಾರ್ಫ್‌ ಅಥವಾ ಟವೆಲ್‌ ಅನ್ನು ಮೂಗು ಮತ್ತು ಬಾಯಿಗೆ ಕಟ್ಟಿಕೊಳ್ಳಬಹುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಇತ್ತೀಚೆಗೆ ಆದೇಶ ಮಾಡಿದ್ದರು.

ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ಅಧಿಕಾರವನ್ನು ಪಾಲಿಕೆಯ ಹಿರಿಯು ಆರೋಗ್ಯ ಪರಿವೀಕ್ಷಕರಿಗೆ, ಕಿರಿಯ ಆರೋಗ್ಯ ಪರಿವೀಕ್ಷಕರಿಗೆ ಆರೋಗ್ಯ ಮೇಲ್ವಿಚಾರಕರಿಗೆ ಹಾಗೂ ಮಾರ್ಷಲ್‌ಗಳಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT