ಭಾನುವಾರ, ಮಾರ್ಚ್ 29, 2020
19 °C
ಔಷಧಿ ಮಳಿಗೆಗಳಲ್ಲಿ ಅಧಿಕ ದರಕ್ಕೆ ಮಾಸ್ಕ್‌ಗಳ ಮಾರಾಟ * ಅಧಿಕಾರಿಗಳಿಂದ ಮುಂದುವರಿದ ದಾಳಿ

ಮುಖಗವಸು: ಸುಲಿಗೆಗೆ ₹10 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಅಗ್ಗದ ದರ‌ದ ಮಾಸ್ಕ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಔಷಧಿ ಮಳಿಗೆಗಳಿಗೆ ತಲಾ ₹ 5 ಸಾವಿರದಿಂದ ₹ 10 ಸಾವಿರದವರೆಗೆ ದಂಡ ವಿಧಿಸಲಾಗಿದೆ. 

ಔಷಧಿ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸುತ್ತಿದ್ದಾರೆ. ಕಳೆದ ವಾರ ದೂರುಗಳ ಅನುಸಾರ ದಾಳಿ ನಡೆಸಿ, ನೋಟಿಸ್ ನೀಡಿದ್ದರು. ಆದರೆ, ನಗರದಲ್ಲಿ ಮುಖಗವಸುಗಳಿಗೆ ಒಂದೇ ಸಮನೆ ಬೇಡಿಕೆ ಹೆಚ್ಚುತ್ತಿರುವ ಪರಿಣಾಮ ಕೆಲ ಔಷಧಿ ಮಳಿಗೆಗಳು ಹಾಗೂ ಮಾರಾಟಗಾರರು ವಸೂಲಿಯನ್ನು ಮುಂದುವರಿಸಿದ್ದಾರೆ. ಮೆಜೆಸ್ಟಿಕ್ ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿಯೂ ₹ 5 ಸರ್ಜಿಕಲ್‌ ಮಾಸ್ಕ್‌ಗಳನ್ನು ₹ 50ರ ವರೆಗೂ ಮಾರಾಟ ಮಾಡಲಾಗುತ್ತಿದೆ. 

ಎನ್‌–95 ಮಾಸ್ಕ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ರಾಜಾಜಿನಗರದ ಪ್ರಜ್ವಲ್ ಸರ್ಜಿಕಲ್ಸ್ ಆ್ಯಂಡ್‌ ಸೈಂಟಿಫಿಕ್ಸ್‌ ಮಳಿಗೆ ಮೇಲೆ ಪ್ರಕರಣ ದಾಖಲಿಸಿ, ₹ 10 ಸಾವಿರ ದಂಡ ವಿಧಿಸಲಾಗಿದೆ. ಕುಂದೇನಹಳ್ಳಿಯ ಬ್ರೂಕ್ಫೀಲ್ಡ್ ಆಸ್ಪತ್ರೆಯಲ್ಲಿಯೂ ಮಾಸ್ಕ್‌ಗಳ ಮೇಲೆ ಹೆಚ್ಚುವರಿ ಹಣ ವಸೂಲಿ ಮಾಡಲಾಗಿದ್ದು, ₹ 10 ಸಾವಿರ ದಂಡ ವಿಧಿಸಲಾಗಿದೆ. ಯಶವಂತಪುರದ ಲೈಫ್‌ ಕೇರ್‌ ಮೆಡಿಕಲ್ಸ್‌ಗೆ ₹ 5 ಸಾವಿರ ದಂಡ ವಿಧಿಸಲಾಗುದೆ. 

ಔಷಧಿ ಮತ್ತು ಮಾಸ್ಕ್‌ಗಳನ್ನು ಮೂಲ ದರಕ್ಕೆ ಮಾರಾಟ ಮಾಡಬೇಕು. ಹೆಚ್ಚಿನ ಹಣ ವಸೂಲಿ ಮಾಡಿದವರಿಗೆ ನೋಟಿಸ್ ಜಾರಿ ಮಾಡಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಔಷಧಿ ನಿಯಂತ್ರಕ ಭಾಗೋಜಿ ಟಿ. ಖಾನಾಪುರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು