₹ 3 ಲಕ್ಷ ಮೌಲ್ಯದ ತಾಮ್ರ ಕದ್ದಿದ್ದವ ಬಂಧನ
ಬೆಂಗಳೂರು: ಸುಲ್ತಾನ್‌ಪೇಟೆ ಮುಖ್ಯರಸ್ತೆಯಲ್ಲಿರುವ ‘ಪೂರ್ವಾಲ್ ಮಾರ್ಟ್’ ಮಳಿಗೆಯಲ್ಲಿ ತಾಮ್ರದ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಆರೋಪದಡಿ ಆರ್. ರವಿ (26) ಎಂಬಾತನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
‘ಪಂತರಪಾಳ್ಯ ನಿವಾಸಿಯಾದ ರವಿ, ಮೇ 19ರಂದು ರಾತ್ರಿ ಕೃತ್ಯ ಎಸಗಿದ್ದ. ಆತನಿಂದ ₹ 3 ಲಕ್ಷ ಮೌಲ್ಯದ ಲೋಹದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮಳಿಗೆ ಮಾಲೀಕ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಮಳಿಗೆ ಚಾವಣಿಗೆ ಹಾಕಲಾಗಿರುವ ಸಿಮೆಂಟ್ ಶೀಟ್ ಒಡೆದು ರಾತ್ರಿ ಒಳ ನುಗ್ಗಿದ್ದ ಆರೋಪಿ, ತಾಮ್ರದ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದ. ಮೇ 20ರಂದು ಬೆಳಿಗ್ಗೆ ಮಾಲೀಕ ಮಳಿಗೆಗೆ ಬಂದು ನೋಡಿದಾಗ ಕೃತ್ಯ ಗೊತ್ತಾಗಿತ್ತು’ ಎಂದೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.