ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನಾಗವಾರ–ಗೊಟ್ಟಿಗೆರೆ ಮಾರ್ಗದ ವೆಲ್ಲಾರ ಜಂಕ್ಷನ್ನಲ್ಲಿ ಮೆಟ್ರೊ
ನಿಲ್ದಾಣ ನಿರ್ಮಾಣದ ವೇಳೆ ಆಲ್ ಸೇಂಟ್ಸ್ ಚರ್ಚ್ಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಸ್ಪಷ್ಟಪಡಿಸಿದೆ.

‘ಮೆಟ್ರೊ: 297 ದಿನಗಳಿಂದ ಪ್ರತಿಭಟನೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗೆ ಸಂಬಂಧಿಸಿದಂತೆ ಈ ಪ್ರತಿಕ್ರಿಯೆ ನೀಡಿರುವ ನಿಗಮವು, ‘ಹೊಸೂರು ರಸ್ತೆಯಲ್ಲಿ ಈ ಮಾರ್ಗ ನಿರ್ಮಾಣವಾಗುತ್ತಿದ್ದು, ಆಲ್ ಸೇಂಟ್ಸ್ ಚರ್ಚ್ ಕಟ್ಟಡ ಇಲ್ಲಿಂದ 36 ಮೀಟರ್ ದೂರದಲ್ಲಿದೆ ಮತ್ತು ಸುರಂಗವು ಚರ್ಚ್ ಕಟ್ಟಡದ ಒಳಗಡೆಯಿಂದ ಹಾದು ಹೋಗುವುದಿಲ್ಲ’ ಎಂದು ಅದು ಹೇಳಿದೆ.

‘ಚರ್ಚ್ ಆವರಣದಲ್ಲಿನ 1,140 ಚದರ ಮೀಟರ್ ಪ್ರದೇಶದಲ್ಲಿನ ಕೆಲವು ಮರಗಳನ್ನು ಮಾತ್ರ ಕಡಿಯಬೇಕಾಗುತ್ತದೆ. ಹೊಸೂರು ರಸ್ತೆಯೂ ಸೇರಿದಂತೆ ಚರ್ಚ್ ಕಟ್ಟಡದ ಅಗಲವು 90 ಮೀಟರ್ ವಿಸ್ತೀರ್ಣದಲ್ಲಿದೆ. ಮೆಟ್ರೊಗೆ ಬೇಕಾಗಿರುವುದು 38 ಮೀಟರ್ ಅಗಲದ ಪ್ರದೇಶ ಮಾತ್ರ. ಹೀಗಾಗಿ, ಚರ್ಚ್ನ ಮುಂದೆ ಸಾಕಷ್ಟು ಜಾಗ ಉಳಿಯುತ್ತದೆ’ ಎಂದು ಅದು ಹೇಳಿದೆ.

‘ಚರ್ಚ್ ಎದುರಿಗಿನ ಬಯಲು ಪ್ರದೇಶ ಮೆಟ್ರೊಗೆ ಅವಶ್ಯಕತೆ ಇದೆ. ಅದೂ, ಮೂರು ವರ್ಷಗಳ ತಾತ್ಕಾಲಿಕ ಅವಧಿಗೆ ಮಾತ್ರ. ಇದಕ್ಕಾಗಿ 26 ಮರಗಳನ್ನು ಮಾತ್ರ ಕಡಿಯಲಾಗುತ್ತದೆ’ ಎಂದೂ ಬಿಎಂಆರ್ಸಿಎಲ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.