ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣಿಕರಿಗೆ ದಟ್ಟಣೆ ಅವಧಿಯಲ್ಲಿ ಶೇ 15 ಹಾಗೂ ದಟ್ಟಣೆ ರಹಿತ ಅವಧಿಯಲ್ಲಿ ಶೇ 20 ರಿಯಾಯಿತಿ ನೀಡಬೇಕು ಎಂದು ಬೆಂಗಳೂರು ಮೆಟ್ರೊ ಮತ್ತು ಉಪನಗರ ರೈಲು ಪ್ರಯಾಣಿಕರ ಸಂಘದ ಅಧ್ಯಕ್ಷ ಪ್ರಕಾಶ್ ಮಂಡೋತ್ ಆಗ್ರಹಿಸಿದ್ದಾರೆ.

ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೋಮವಾರ ಮನವಿ ಸಲ್ಲಿಸಿರುವ ಅವರು, ‘ಸ್ಮಾರ್ಟ್ಕಾರ್ಡ್ ಮಾತ್ರವಲ್ಲ ಕ್ಯೂಆರ್ ಕೋಡ್ ಬಳಸಿ ಪ್ರಯಾಣ ಮಾಡುವವರಿಗೂ ಈ ರಿಯಾಯಿತಿಯನ್ನು ಒದಗಿಸಬೇಕು. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಂಗಳ ಪಾಸ್ಗಳನ್ನು ಶೇ 35ರಷ್ಟು ರಿಯಾಯಿತಿಯಲ್ಲಿ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಸ್ಮಾರ್ಟ್ ಕಾರ್ಡ್ಗಳಿಗೆ ಟಾಪ್ಅಪ್ಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಬೇಕು. ₹ 1,000 ಟಾಪ್ಅಪ್ ಮಾಡಿಸುವವರಿಗೆ ಶೇ 10 ರಿಂದ ಶೇ 15ರಷ್ಟು ಹೆಚ್ಚುವರಿ ಮೌಲ್ಯ ಜಮಾ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಕೊನೆಯ ಮೈಲ್ ಸಂಪರ್ಕಕ್ಕಾಗಿ ಬಿಎಂಟಿಸಿ ಬಸ್ಗಳನ್ನು ಹೆಚ್ಚಿಸಬೇಕು. ಕೈಗೆಟಕುವ ದರದಲ್ಲಿ ಇ–ರಿಕ್ಷಾ, ಇ.ಸ್ಕೂಟರ್ಗಳನ್ನು ಪರಿಚಯಿಸಬೇಕು. ಪ್ರಯಾಣೇತರ ಆದಾಯ ಹೆಚ್ಚಿಸಲು ಕೊರಿಯರ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.