ಬೆಂಗಳೂರು: ಸ್ಮಾರ್ಟ್ ಮೊಬಿಲಿಟಿ ಕಾರ್ಡ್ ಬಳಕೆ ಮಾಡುವ ಮೆಟ್ರೊ ರೈಲು ಪ್ರಯಾಣಿಕರಿಗೆ ನೀಡುತ್ತಿದ್ದ ಶೇ 15ರಷ್ಟು ರಿಯಾಯಿತಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಶೇ 10ರಷ್ಟು ಕಡಿತಗೊಳಿಸಿದೆ.

ಒಂದು ನಿಲ್ದಾಣದಿಂದ ನಿರ್ದಿಷ್ಟ ನಿಲ್ದಾಣಕ್ಕೆ ಟಿಕೆಟ್ ಪಡೆದು ಪ್ರಯಾಣಿಸುವವರಿಗೆ ಅಂದಾಜು ₹10 ಇದ್ದರೆ, ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ₹7 ಇತ್ತು. ಈಗ ಶೇ 5ರಷ್ಟು ಮಾತ್ರ ರಿಯಾಯಿತಿ ದೊರೆಯಲಿದ್ದು, 50 ಪೈಸೆ ಮಾತ್ರ ರಿಯಾಯಿತಿ ದೊರೆಯಲಿದೆ. ಪರಿಷ್ಕೃತ ದರವು ಜ.20ರಿಂದ ಅನ್ವಯವಾಗಲಿದೆ ಎಂದು ನಿಗಮ ತಿಳಿಸಿದೆ.

‘ಎಲ್ಲಾ ಮೆಟ್ರೊ ರೈಲುಗಳನ್ನು 6 ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ. ಇದರ ಜತೆಗೆ ಸಾಮಾನ್ಯ ಸೇವೆಗಳ ವೆಚ್ಚವೂ ಹೆಚ್ಚಳವಾಗಿದೆ. ಆದರೂ 2017ರಿಂದ ಪ್ರಯಾಣದರ ಹೆಚ್ಚಳ ಮಾಡಿಲ್ಲ. ಹೀಗಾಗಿ 2019–2020ನೇ ಆರ್ಥಿಕ ವರ್ಷದಲ್ಲಿ ₹60 ಕೋಟಿ ನಷ್ಟ ಅಂದಾಜಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.

ನಿತ್ಯ ಸುಮಾರು 4.20 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣಿಸುತ್ತಾರೆ. ಈ ಪೈಕಿ ಶೇ 62ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ. ಅವರೆಲ್ಲರಿಗೂ ಇದರ ಬಿಸಿ ತಟ್ಟಲಿದೆ.

ರಿಯಾಯಿತಿ ಕಡಿತದಿಂದ ಪ್ರತಿದಿನ ₹7 ಲಕ್ಷದಿಂದ ₹8 ಲಕ್ಷ (ತಿಂಗಳಿಗೆ ₹2 ಕೋಟಿ) ಹೆಚ್ಚುವರಿ ಆದಾಯವನ್ನು ನಿಗಮ ನಿರೀಕ್ಷಿಸಿದೆ. ಸ್ಮಾರ್ಟ್ ಕಾರ್ಡ್ನಲ್ಲಿ ಕನಿಷ್ಠ ₹50 ಠೇವಣಿ ಇರಬೇಕು ಎಂಬುದನ್ನು ಇತ್ತೀಚೆಗೆ ಕಡ್ಡಾಯಗೊಳಿಸಿತ್ತು.

ಪ್ರಯಾಣಿಕರ ಆಕ್ರೋಶ

‘ಪ್ರಯಾಣದರದಿಂದ ತಿಂಗಳಿಗೆ ₹30 ಕೋಟಿಯಿಂದ ₹33 ಕೋಟಿ ವರಮಾನವನ್ನು ಬಿಎಂಆರ್ಸಿಎಲ್ ಸಂಗ್ರಹಿಸುತ್ತಿದೆ. ಇದರಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆದಾರರ ಪಾಲು ಸರಾಸರಿ ₹19 ಕೋಟಿ ಇದೆ. ಮುಂಗಡವಾಗಿಯೇ ಸ್ಮಾರ್ಟ್ ಕಾರ್ಡ್ಗೆ ಹಣ ಸಂದಾಯ ಮಾಡುವ ಪ್ರಯಾಣಿಕರ ಈ ಮೊತ್ತಕ್ಕೆ ನಿಗಮ ಬಡ್ಡಿ ಪಾವತಿಸುವುದಿಲ್ಲ. ಅದರ ಬದಲಿಗೆ ಈ ಪ್ರಯಾಣಿಕರಿಗೆ ಶೇ 15ರಷ್ಟು ರಿಯಾಯಿತಿ ನೀಡುತ್ತಿತ್ತು. ಅದನ್ನು ಕಡಿತಗೊಳಿಸಿರುವುದು ಸರಿಯಲ್ಲ’ ಎಂದು ’ನಮ್ಮ ಮೆಟ್ರೊ’ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.