ಬೆಂಗಳೂರು: ಮೆಜೆಸ್ಟಿಕ್ ಮೆಟ್ರೊ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ಜನದಟ್ಟಣೆ ನಿಯಂತ್ರಣಕ್ಕಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ನೇರಳೆ ಮತ್ತು ಹಸಿರು ಮಾರ್ಗ ಬದಲಾವಣೆಗೆ ಅನುಕೂಲವಾಗುವಂತೆ ನೂತನ ದ್ವಾರವನ್ನು ಸೋಮವಾರ ತೆರೆಯಲಾಗಿದೆ.

ಕಾನ್‌ಕೋರ್ಸ್ ಮಟ್ಟದಲ್ಲಿರುವ ಈ ದ್ವಾರವು ನೇರಳೆ ಮಾರ್ಗದ ಎರಡನೇ ಪ್ಲಾಟ್‌ಫಾರ್ಮ್ ಮತ್ತು ಹಸಿರು ಮಾರ್ಗದ 3 ಹಾಗೂ 4ನೇ ಪ್ಲಾಟ್‌ಫಾರ್ಮ್ ನಡುವೆ ನೇರವಾಗಿ ಸಂಪರ್ಕ ಕಲ್ಪಿಸಲಿದೆ. ಇದರ ಪಕ್ಕದಲ್ಲಿಯೆ ಹಿಂದಿನಿಂದ ಇರುವ ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ಮೂಲಕವೂ ಮಾರ್ಗ ಬದಲಾವಣೆ ಮಾಡಿಕೊಳ್ಳಬಹುದು.

ಸದ್ಯ 73.81 ಕಿ.ಮೀ. ಉದ್ದದ ಮಾರ್ಗದಲ್ಲಿ ಸೇವೆ ಕಲ್ಪಿಸುತ್ತಿರುವ ‘ನಮ್ಮ ಮೆಟ್ರೊ’ಗೆ ಮೆಜೆಸ್ಟಿಕ್ ಮಾತ್ರವೇ ಇಂಟರ್‌ಚೇಂಜ್ ನಿಲ್ದಾಣವಾಗಿದೆ. ಪ್ರತಿದಿನ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಇದನ್ನು ಬಳಸುತ್ತಿದ್ದಾರೆ. ಪೀಕ್ ಅವರ್‌ನಲ್ಲಿ ಇಲ್ಲಿ ವಿಪರೀತ ಜನದಟ್ಟಣೆ ಉಂಟಾಗುತ್ತಿದೆ. ಅದರಲ್ಲೂ, ನೇರಳೆ ಮತ್ತು ಹಸಿರು ಮಾರ್ಗ ಬದಲಾವಣೆ ಸಂದರ್ಭದಲ್ಲಿ ಪ್ರಯಾಣಿಕರ ನಡುವೆ ನೂಕುನುಗ್ಗಲು ಆಗುತ್ತಿದೆ. ಇದರ ನಿವಾರಣೆಗೆ ಬಿಎಂಆರ್‌ಸಿಎಲ್ ಇದೀಗ ಹೊಸದಾಗಿ ಮಾರ್ಗ ಬದಲಾವಣೆಗೆ ದ್ವಾರ ತೆರೆಯಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.