ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ರಕ್ಷಕ್ ಫೌಂಡೇಷನ್‌ನಿಂದ ಸೇನಾ ತರಬೇತಿ

Last Updated 8 ಅಕ್ಟೋಬರ್ 2021, 17:31 IST
ಅಕ್ಷರ ಗಾತ್ರ

ಬೆಂಗಳೂರು: ಸೇನೆ ಮತ್ತು ಪೊಲೀಸ್‌ ಇಲಾಖೆಗೆ ಸೇರಲು ಇಚ್ಛಿಸುವಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ಕೇಂದ್ರದ ಮೂಲಕ ತರಬೇತಿ ನೀಡಲು ಭಾರತ್ ರಕ್ಷಕ್ ಫೌಂಡೇಷನ್ ಮುಂದಾಗಿದೆ.

‘ಮೊದಲು ಭಾರತಕ್ಕಾಗಿ ನಾವು–ನಂತರ ಭಾರತ ನಮಗಾಗಿ’ ಎನ್ನುವ ಪರಿಕಲ್ಪನೆಯಡಿ ಈ ಪ್ರತಿಷ್ಠಾನ ಸ್ಥಾಪನೆಯಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಸೇನೆಗೆ ಸೇರಲು ಸೂಕ್ತ ಸೈನಿಕ ತರಬೇತಿ ನೀಡುವ ಉದ್ದೇಶ ಹೊಂದಿದ್ದೇವೆ’ ಎಂದುಸಂಸ್ಥೆಯಜಂಟಿ ಕಾರ್ಯದರ್ಶಿ ಬ್ರಿಗೇಡಿಯರ್ ರವಿ ಮುನಿಸ್ವಾಮಿ ತಿಳಿಸಿದರು.

ಅಧ್ಯಕ್ಷ ಮೇಜರ್ ಎನ್.ರಘುರಾಮ್ ರೆಡ್ಡಿ,‘ಬಡ ಮಕ್ಕಳಿಗೆ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡುವ ಜತೆಗೆ ಸೇನೆಯಲ್ಲಿ ಕೆಲಸ ಸಿಕ್ಕದಿದ್ದರೆ, ಕಾರ್ಖಾನೆಗಳಲ್ಲಿ ಕೆಲಸ ಕೊಡಿಸುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ವಿಳಾಸ:ಭಾರತ್ ರಕ್ಷಕ್ ಫೌಂಡೇಷನ್, ಚಾಮುಂಡಿ ಬಡಾವಣೆ, ವಿದ್ಯಾರಣ್ಯಪುರ.

ಸಂಪರ್ಕ:9449888085

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT