ಬೆಂಗಳೂರು: ‘ಮಡಿವಾಳ ಮಾಚಿದೇವರು ಸಮಾಜದಲ್ಲಿನ ತಾರತಮ್ಯ ಮತ್ತು ಡೋಂಗಿತನವನ್ನು ವಿರೋಧಿಸುವ ಮೂಲಕ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದರು. ಅಂತಹ ವೈಚಾರಿಕ ಪ್ರಜ್ಞೆ ನಮ್ಮಲ್ಲೂ ಬರಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದಾಗಿತ್ತು. ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಅಚ್ಚುಕಟ್ಟುತನ, ಶುಚಿ ಅಗತ್ಯ. ಜೊತೆಗೆ ಪರಿಸರವೂ ಶುಚಿಯಾಗಿರಬೇಕು. ಮಡಿವಾಳ ಮಾಚಿದೇವ ಅಂಥ ದಾರಿ ತೋರಿದವರು. ಕಾಯಕ ಮಾಡುತ್ತಲೇ ವಚನ ರಚಿಸಿ ಹಾಡಿದವರು ಎಂದು ನೆನಪು ಮಾಡಿಕೊಂಡರು.

ಇಂದು ಸಮಾಜದಲ್ಲಿ ಜಾತಿಗಳ ನಡುವೆ ಹಾಗೂ ಧರ್ಮಗಳ ನಡುವೆ ಚರ್ಚೆ ಮತ್ತು ಸಂಘರ್ಷ ಹೆಚ್ಚಾಗಿರುವುದು ವಿಪರ್ಯಾಸ. ಇದನ್ನು ಮೀರಿ ಬದುಕುವ ತತ್ವವನ್ನು ಶರಣರು ನಮಗೆ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿಯವರ ವೈದ್ಯಕೀಯ ಸಲಹೆಗಾರ ಡಾ.ರವಿಕುಮಾರ್, ಮಡಿವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಪ್ಪ, ಸಮುದಾಯದ ಮುಖಂಡ ಗೋಪಾಲ್, ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಉಪಸ್ಥಿತರಿದ್ದರು.ಸ

‘ಗುರುಪೀಠಕ್ಕೆ ಒಂದು ಎಕರೆ ಜಾಗ’

ಹಿಂದುಳಿದ ವರ್ಗಗಳ ಸಮುದಾಯದ ಎಲ್ಲ ಮಠಗಳಿಗೆ ಬೆಂಗಳೂರಿನ ಸುತ್ತಮುತ್ತ ಒಂದೆರೆಡು ಎಕರೆ ಜಾಗ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಮಡಿವಾಳ ಸಮುದಾಯದ ಗುರು ಪೀಠಕ್ಕೆ ಒಂದು ಎಕರೆ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಕೆಂಗೇರಿಯಲ್ಲಿರುವ ಗುರುಪೀಠದ ಮೂರು ಎಕರೆ ಜಮೀನನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮುಖಂಡರು ಕಾರ್ಯಕ್ರಮದಲ್ಲಿ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು. ಒತ್ತುವರಿಯಾಗಿರುವ ಜಾಗವನ್ನು ಗುರು ಪೀಠಕ್ಕೆ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.ಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.