ಬೆಂಗಳೂರು:ಕೆಪಿಟಿಸಿಎಲ್ ಹಾಗೂ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಿರಿಯ ಪವರ್ ಮ್ಯಾನ್, ಸ್ಟೇಷನ್ ಪರಿಚಾರಕ ಹುದ್ದೆಗೆ ನೇಮಕಗೊಂಡ ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸಲಹೆ ನೀಡಿದ್ದಾರೆ.

‘ನೇಮಕಗೊಂಡ ಎಲ್ಲರನ್ನೂ ಇಂಧನ ಕುಟುಂಬಕ್ಕೆ ಸ್ವಾಗತಿಸುವೆ. ನಿರೀಕ್ಷೆಗೆ ತಕ್ಕಂತೆ, ವೃತ್ತಿ ಧರ್ಮಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುವ ನಂಬಿಕೆ ಇದೆ.ಸರ್ಕಾರಿ ನೌಕರಿಗೆ ಸೇರುವುದು ಎಂದರೆ ಉದ್ಯೋಗ ಭದ್ರತೆಗೆ ಮಾತ್ರವಲ್ಲ. ನಿಯೋಜಿತಗೊಂಡ ಕೆಲಸಕ್ಕೆ ಬದ್ಧರಾಗಿರುವುದು ಅಷ್ಟೇ ಮುಖ್ಯ. ಆಗ ಮಾತ್ರ ಬದುಕಿಗೊಂದು ಸಾರ್ಥಕತೆ ಲಭಿಸುತ್ತದೆ.ಕೆಲಸ ಪಡೆಯುವಾಗ ತೋರಿದ ಬದ್ಧತೆ, ಶ್ರದ್ಧೆಯನ್ನು ಕೊನೆಯವರೆಗೂ ಉಳಿಸಿಕೊಳ್ಳಬೇಕು. ಕಳಂಕರಹಿತ ಜೀವನವೂ ಅಗತ್ಯ ಎಂದು ಕಿವಿಮಾತು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.