ಎಲ್ಲರಿಗೂ ಒಬ್ಬರು ಗುರು ಇರುತ್ತಾರೆ. ನನಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ರಾಜಕೀಯ ಗುರು’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಮರಿಸಿದರು. ‘ನಾನೀಗ ಕಾಂಗ್ರೆಸ್ ಪಕ್ಷದಲ್ಲಿ ಇರಬಹುದು. ಪಕ್ಷ ಬದಲಾದರೆ ಗುರು ಬದಲಾಗಲ್ಲ. ರಾಜಕೀಯ ಕ್ಷೇತ್ರದಲ್ಲಿ ನನ್ನನ್ನು ಬೆಳೆಸಿದವರನ್ನು ನಾನು ನೆನಪು ಮಾಡಿಕೊಳ್ಳಲೇಬೇಕು. ಅವರು ಬಹಳ ಬಡತನದಿಂದ ಮೇಲಕ್ಕೆ ಬಂದವರು. ಪ್ರಧಾನಿಯೂ ಆದರು’ ಎಂದು ಹೇಳಿದರು.