ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವರ ಸಲ್ಲಿಸದ 36 ಶಾಸಕರು

ಲೋಕಾಯುಕ್ತರ ನೋಟಿಸ್‌ಗೂ ಸಿಗದ ಬೆಲೆ!
Last Updated 1 ನವೆಂಬರ್ 2019, 2:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆಯ 24 ಹಾಗೂ ವಿಧಾನಪರಿಷತ್ತಿನ 12 ಸದಸ್ಯರು ಗಡುವು ಮುಗಿದು ಮೂರು ತಿಂಗಳು ಕಳೆದರೂ ಲೋಕಾಯುಕ್ತರ ಮುಂದೆ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಂಡಿಲ್ಲ.

ಕರ್ನಾಟಕ ಲೋಕಾಯುಕ್ತ ಕಾಯ್ದೆ ಅನ್ವಯ ಪ್ರತಿ ವರ್ಷ ಜುಲೈ ಅಂತ್ಯದೊಳಗೆ ಲೋಕಾಯುಕ್ತರ ಮುಂದೆ ಶಾಸಕರು ತಮ್ಮ ಆಸ್ತಿ ಘೋಷಣೆ ಮಾಡುವುದು ಕಡ್ಡಾಯ. ಇದನ್ನು ಪಾಲಿಸದ ಶಾಸಕರ ಹೆಸರುಗಳನ್ನು ಲೋಕಾಯುಕ್ತರು ಪತ್ರಿಕೆಗಳಿಗೆ ಜಾಹಿರಾತು ನೀಡಿ ಪ್ರಕಟಿಸುತ್ತಾರೆ. ಆನಂತರ, ಅಂಥವರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸುತ್ತಾರೆ.

ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ, ಒಬ್ಬರು ನಾಮಕರಣಗೊಂಡಿರುವ ಸದಸ್ಯರೂ ಸೇರಿ 225. ಈ ಪೈಕಿ 17 ಸದಸ್ಯರನ್ನು ಹಿಂದಿನ ಸ್ಪೀಕರ್‌ ರಮೇಶ್‌ ಕುಮಾರ್‌ ಅನರ್ಹಗೊಳಿಸಿದ್ದಾರೆ. ಹೀಗಾಗಿ ಸದ್ಯದ ಸದಸ್ಯರ ಬಲ 208. ವಿಧಾನಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 75.

ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಆಸ್ತಿ ವಿವರ ಸಲ್ಲಿಸದ ವಿಧಾನಸಭೆಯ 43 ಹಾಗೂ ಪರಿಷ
ತ್ತಿನ 21 ಸದಸ್ಯರಿಗೆ ಆಗಸ್ಟ್‌ 13ರಂದು ನೋಟಿಸ್‌ ನೀಡಿದ್ದರು. 10 ದಿನದೊಳಗಾಗಿ ಆಸ್ತಿ ವಿವರ ಘೋಷಣೆ ಮಾಡುವಂತೆ ನೋಟಿಸ್‌ ನೀಡಿದ್ದರು. ಇದಾದ ಮೇಲೂ ಅಕ್ಟೋಬರ್‌ 24ರವರೆಗೂ 36 ಶಾಸಕರು ಲೋಕಾಯುಕ್ತರ ನೋಟಿಸ್‌ಗೆ ಕಿಮ್ಮತ್ತು ನೀಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಚ್‌.ಎಂ. ವೆಂಕಟೇಶ್‌ ಹೇಳಿದ್ದಾರೆ.

ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸುವಂತೆಯೂ ಅವರು
ಒತ್ತಾಯಿಸಿದ್ದಾರೆ.

ವಿಧಾನಸಭೆ ಸದಸ್ಯರು

ಎಂ.ಸಿ ಮನಗೂಳಿ, ಎಂ.ವೈ.ಪಾಟೀಲ, ರಾಜಕುಮಾರ್‌ ಪಾಟೀಲ, ಬಿ.ವಿ. ನಾರಾಯಣರಾವ್‌, ರಹೀಂಖಾನ್‌, ಡಿ.ಎಸ್‌. ಹೊಲಗೇರಿ, ಕುಸುಮತಿ ಶಿವಳ್ಳಿ, ರೂಪಾಲಿ ಸಂತೋಷ್‌ ನಾಯಕ್‌, ದಿನಕರ ಕೇಶವ ಶೆಟ್ಟಿ, ಆರ್‌. ಶಂಕರ್‌, ಎಂ.ಪಿ. ರೇಣುಕಾಚಾರ್ಯ, ಟಿ.ಡಿ. ರಾಜೇಗೌಡ, ಜಿ.ಬಿ ಜ್ಯೋತಿ ಗಣೇಶ್‌, ವೆಂಕಟರಮಣಪ್ಪ, ಕೆ.ವೈ ನಂಜೇಗೌಡ, ಬಿ.ಎಚ್‌. ಜಮೀರ್‌ ಅಹಮದ್‌ ಖಾನ್‌, ಸತೀಶ್‌ ರೆಡ್ಡಿ, ವೆಂಕಟರಮಣಯ್ಯ, ಎಂ. ಶ್ರೀನಿವಾಸ್‌, ಸಿ.ಎನ್‌. ಬಾಲಕೃಷ್ಣ, ಹರೀಶ್‌‍‍ಪೂಂಜ, ಎ.ಎಚ್‌. ವಿಶ್ವನಾಥ್, ಎನ್‌. ಮಹೇಶ್‌ ಮತ್ತು ರೂಪಕಲಾ

'ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕು. ಆದರೆ, ಇದುವರೆಗೆ ಕ್ರಮಕ್ಕೆ ಮುಂದಾಗದಿರುವುದು ದುರದೃಷ್ಟಕರ'
-ಎಚ್‌.ಎಂ. ವೆಂಕಟೇಶ್‌, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT