ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮೊಬೈಲ್–ಬೈಕ್ ಕಳ್ಳತನ: ಆಟೊ ಚಾಲಕನ ಬಂಧನ

Published 1 ಜೂನ್ 2024, 15:25 IST
Last Updated 1 ಜೂನ್ 2024, 15:25 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿಚಕ್ರ ವಾಹನಗಳ ಕಳ್ಳತನ ಹಾಗೂ ಮೊಬೈಲ್‌ ಫೋನ್‌ಗಳನ್ನು ಸುಲಿಗೆ ಮಾಡುತ್ತಿದ್ದ ಆಟೊ ಚಾಲಕನನ್ನು ಹಲಸೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ಶಿವಾಜಿನಗರದ ನಿವಾಸಿ ಶಾಬಾಜ್‌ಖಾನ್‌ (25) ಬಂಧಿತ ಆರೋಪಿ. ಆತನಿಂದ ಒಟ್ಟು ₹2.60 ಲಕ್ಷ ಮೌಲ್ಯದ ನಾಲ್ಕು ಮೊಬೈಲ್ ಫೋನ್, ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಂಧಿತನ ವಿರುದ್ಧ ಹಲಸೂರು ಠಾಣೆಯ ವ್ಯಾಪ್ತಿಯಲ್ಲಿ ಮೂರು ಮೊಬೈಲ್‌ ಫೋನ್‌, ಹೊಸಕೋಟೆ ಠಾಣೆಯ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡಿದ್ದ ಪ್ರಕರಣ ಪತ್ತೆಯಾಗಿವೆ. ಆರ್.ಟಿ. ನಗರ ಹಾಗೂ ಸಿದ್ಧಾಪುರ ಠಾಣೆಗಳಲ್ಲೂ 2 ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿವೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT