ಬೆಂಗಳೂರು: ಎಚ್ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡುರಸ್ತೆಯಲ್ಲೇ ಯುವತಿಯೊಬ್ಬಳ ಗುಪ್ತಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಈ ಸಂಬಂಧ ಆರೋಪಿ ಮಹೇಶ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.

‘ಇದೇ 26ರಂದು ಸಂಜೆ ನಡೆದಿರುವ ಘಟನೆ ಸಂಬಂಧ ಯುವತಿ ದೂರು ನೀಡಿದ್ದಾರೆ. ಆರೋಪಿ ಮಹೇಶ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕುಡಿಯುವ ನೀರು ತರಲೆಂದು ಯುವತಿ ಮನೆಯಿಂದ ಹೊರಗೆ ಬಂದಿದ್ದರು. ನೀರು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಮನೆಯತ್ತ ಹೊರಟಿದ್ದರು. ಅದೇ ವೇಳೆ ಎದುರಿಗೆ ಬಂದಿದ್ದ ಆರೋಪಿ, ಯುವತಿಯ ಬಟ್ಟೆಯನ್ನು ಎಳೆದಾಡಿ ಗುಪ್ತಾಂಗ ಮುಟ್ಟಿದ್ದ. ಯುವತಿ ಕಿರುಚಾಡುತ್ತಿದ್ದಂತೆ ಸ್ಥಳದಿಂದ ಓಡಿಹೋಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೃತ್ಯಕ್ಕೂ ಕೆಲ ದಿನಗಳ ಮುಂಚಿನಿಂದಲೇ ಯುವತಿಯನ್ನು ಆರೋಪಿ ಹಿಂಬಾಲಿಸುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿ ಚುಡಾಯಿಸುತ್ತಿದ್ದ. ಎಚ್ಚರಿಕೆ ನೀಡಿದರೂ ತನ್ನ ಚಾಳಿ ಮುಂದುವರಿಸಿದ್ದ. ಈ ಸಂಗತಿಯನ್ನು ಯುವತಿ ತಿಳಿಸಿದ್ದಾರೆ. ಆರೋಪಿ ಬೇರೆ ಯುವತಿಯರ ಜೊತೆಯೂ ಇದೇ ರೀತಿ ನಡೆದುಕೊಂಡಿರುವ ಮಾಹಿತಿ ಇದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.