ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯನ್ನೇ ಕೊಂದು ‘ಸಹಜ ಸಾವು’ ಕಥೆ ಕಟ್ಟಿದ ಮಗಳು!

ವೈಯಾಲಿಕಾವಲ್ ಪೊಲೀಸರಿಂದ ಮಗಳು– ಅಳಿಯನ ಬಂಧನ
Last Updated 8 ಮಾರ್ಚ್ 2020, 21:26 IST
ಅಕ್ಷರ ಗಾತ್ರ

ಬೆಂಗಳೂರು: ಕೇಳಿದಾಗಲೆಲ್ಲ ಹಣ ಕೊಡುತ್ತಿರಲಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಕೊಂದು ‘ಸಹಜ ಸಾವು’ ಎಂಬ ಕಥೆ ಕಟ್ಟಿದ್ದ ವೇಣಿ ಹಾಗೂ ಆಕೆಯ ಪತಿ ಕುಮಾರ್, ಮೃತದೇಹದ ಮರಣೋತ್ತರ ಪರೀಕ್ಷೆ ವರದಿಯಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ಫೆ. 19ರಂದು ನಡೆದಿದ್ದ ಅನುಸೂಯಮ್ಮ (43) ಎಂಬುವರ ಕೊಲೆ ಸಂಬಂಧ, ಅವರ ಮಗಳು ವೇಣಿ ಹಾಗೂ ಅಳಿಯ ಕುಮಾರ್‌ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ಅನುಸೂಯಮ್ಮ, ವೇಣಿ ಅವರನ್ನು ಕೆಲ ವರ್ಷಗಳ ಹಿಂದೆ ಕುಮಾರ್ ಜೊತೆ ಮದುವೆ ಮಾಡಿಕೊಟ್ಟಿದ್ದರು. ಪ್ರತ್ಯೇಕವಾಗಿ ವಾಸವಿದ್ದ ದಂಪತಿ, ಆಗಾಗ ಅನುಸೂಯಮ್ಮ ಮನೆಗೆ ಬಂದು ಹೋಗುತ್ತಿದ್ದರು. ಆಗ ಹಣಕ್ಕಾಗಿ ಪೀಡಿಸುತ್ತಿದ್ದರು. ಆರಂಭದಲ್ಲಿ ಮಗಳು–ಅಳಿಯನಿಗೆ ಹಣ ಕೊಟ್ಟಿದ್ದ ಅನುಸೂಯಮ್ಮ, ನಂತರ ನಿರಾಕರಿಸಿದ್ದರು.’

‘ಫೆ. 19ರಂದು ಮನೆಗೆ ಬಂದಿದ್ದ ಮಗಳು– ಅಳಿಯ ಹಣ ನೀಡುವಂತೆ ಕೇಳಿದ್ದರು. ಹಣವಿಲ್ಲವೆಂದು ಅನುಸೂಯಮ್ಮ ಹೇಳಿದ್ದರು. ಅಷ್ಟಕ್ಕೆ ಜಗಳ ತೆಗೆದಿದ್ದ ದಂಪತಿ ಹಲ್ಲೆ ಮಾಡಿದ್ದರು. ಕುಮಾರ್ ಅನುಸೂಯಮ್ಮ ಅವರ ಕಪಾಳಕ್ಕೆ ಹೊಡೆದಿದ್ದ.’

‘ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಕುಸಿದು ಬಿದ್ದಿದ್ದ ಅನುಸೂಯಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು. ಠಾಣೆಗೂ ಮಾಹಿತಿ ನೀಡಿದ್ದರು. ಪೊಲೀಸರಿಗೆ ಹೇಳಿಕೆ ನೀಡಿದ್ದ ವೇಣಿ, ‘ನನ್ನ ತಾಯಿಯದ್ದು ಸಹಜ ಸಾವು’ ಎಂದಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಇತ್ತೀಚೆಗೆ ಮರಣೋತ್ತರ ಪರೀಕ್ಷೆ ವೇಣಿ ಹಾಗೂ ಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ತಪ್ಪೊಪ್ಪಿಕೊಂಡರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT