ಬೆಂಗಳೂರು: ಗುರಾಯಿಸಿದ ಕಾರಣಕ್ಕೆ ನಡೆದ ಜಗಳವು ರವಿಕಿರಣ್ (27) ಎಂಬುವವರ ಕೊಲೆಯಲ್ಲಿ ಅಂತ್ಯವಾಗಿದ್ದು, ಆರೋಪಿಬಾಲಕೃಷ್ಣನನ್ನು (19) ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಯುವಕರಿಬ್ಬರೂ ಅಟ್ಟೂರು ಲೇಔಟ್ ನಿವಾಸಿಗಳು. ಏಪ್ರಿಲ್ 25ರಂದು ಠಾಣೆ ವ್ಯಾಪ್ತಿಯ ಬೀಡಾ ಅಂಗಡಿಯೊಂದಕ್ಕೆ ಇಬ್ಬರೂ ಸಿಗರೇಟ್ ಖರೀದಿಸಲು ಹೋಗಿದ್ದರು. ಗುರಾಯಿಸಿದ ಎಂಬ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳವು ವಿಕೋಪಕ್ಕೆ ತಿರುಗಿತ್ತು. ಆರೋಪಿ ಬಾಲಕೃಷ್ಣ ಸಿಮೆಂಟ್ ಇಟ್ಟಿಗೆಯೊಂದರಿಂದ ರವಿಕೃಷ್ಣ ಅವರ ತಲೆಗೆ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಶನಿವಾರ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.