ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಬಿಟ್ಟು, ದೇಶ ಕಟ್ಟುವವರಿಗೆ ಮತ ನೀಡಿ: ಹಂಸಲೇಖ ಅಭಿಮತ

‘ಸಂವಿಧಾನ ಉಳಿಸಿ, ಜಾಗೃತಿ ನಡಿಗೆ’ಯಲ್ಲಿ ಹಂಸಲೇಖ ಅಭಿಮತ
Published 18 ಏಪ್ರಿಲ್ 2024, 16:47 IST
Last Updated 18 ಏಪ್ರಿಲ್ 2024, 16:47 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ದ್ವೇಷ ಬಿಟ್ಟು, ದೇಶ ಕಟ್ಟುವವರಿಗೆ ಮತ ನೀಡಬೇಕು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಕರೆ ನೀಡಿದರು.

ಜಾಗೃತ ನಾಗರಿಕರು ಕರ್ನಾಟಕ ಗುರುವಾರ ಆಯೋಜಿಸಿದ್ದ ‘ಸಂವಿಧಾನ ಉಳಿಸಿ, ಜಾಗೃತಿ ನಡಿಗೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ನೇಹ, ಪ್ರೀತಿ, ಸೌಹಾರ್ದ ಎಂಬ ಭಾರತದ ಸಂಸ್ಕೃತಿ–ಪರಂಪರೆಗಳನ್ನು ಬೆಳೆಸುವ ಮನೋಧರ್ಮದವರನ್ನು ಈ ಚುನಾವಣೆಯಲ್ಲಿ ಆಯ್ಕೆ ಮಾಡಬೇಕಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಹೆಜ್ಜೆ ಹಾಕಿದವರನ್ನು ತಿರಸ್ಕರಿಸಬೇಕು. ಸಂವಿಧಾನ ಬದಲಾಯಿಸುವ ಅವಕಾಶವನ್ನು ಯಾರಿಗೂ ನೀಡಬಾರದು. ಸಂವಿಧಾನ ಉಳಿಯದಿದ್ದರೆ ನಾವು ಯಾರು ಉಳಿಯುವುದಿಲ್ಲ’ ಎಂದು ಹೇಳಿದರು.

ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ, ‘ಬಹುತ್ವ ಭಾರತದೊಳಗೆ ಒಕ್ಕೂಟ ವ್ಯವಸ್ಥೆ ಇದೆ. ಏಕ ದೇಶ, ಏಕ ಸಂಸ್ಕೃತಿ, ಏಕ ಧರ್ಮ ಎನ್ನುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಈ ನಡೆಯನ್ನು ಅನುಸರಿಸುವವರು ದೇಶದ ಸಂವಿಧಾನದ ರಕ್ಷಕರಾಗುವುದಿಲ್ಲ. ಆದ್ದರಿಂದ, ಈ ಚುನಾವಣೆಯಲ್ಲಿ ಸಂವಿಧಾನ ರಕ್ಷಿಸುವವರನ್ನು ಆಯ್ಕೆ ಮಾಡುವುದರ ಮೂಲಕ ಸಂವಿಧಾನ ವಿರೋಧಿಗಳನ್ನು ತಿರಸ್ಕರಿಸಬೇಕು’ ಎಂದು ಕರೆ ನೀಡಿದರು.

ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ‘ಕಳೆದ ಹತ್ತು ವರ್ಷಗಳಲ್ಲಿ ಅನುಭವಿಸಿದ್ದ ಕಷ್ಟ, ಸಂಕಟಗಳಿಗೆ ಈ ಚುನಾವಣೆಯಲ್ಲಿ ಅಂತ್ಯ ಹಾಡಬೇಕಿದೆ. ಸಂವಿಧಾನ ಉಳಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭದ್ರಗೊಳಿಸಬೇಕಿದೆ. ನಾವು ರಾಜ್ಯದಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ’ ಎಂದರು.

ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಪ್ರಜಾಪ್ರಭುತ್ವ–ಸಂವಿಧಾನ ಉಳಿಸಿ’ ಎಂಬ ಘೋಷಣಾ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. 

ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್, ಜಿ. ರಾಮಕೃಷ್ಣ, ಎಚ್. ದಂಡಪ್ಪ, ಸಾಮಾಜಿಕ ಹೋರಾಟಗಾರ್ತಿ ಕೆ.ಎಸ್. ವಿಮಲಾ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT