ಶನಿವಾರ, ಆಗಸ್ಟ್ 13, 2022
24 °C

ಮೆಟ್ರೋ ಹಸಿರು ಮಾರ್ಗದಲ್ಲಿ ಒಂದು ತಾಸು ಮೊದಲು ಸಂಚಾರ ಸ್ಥಗಿತ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ನಮ್ಮ ಮೆಟ್ರೊ' ಹಸಿರು ಮಾರ್ಗದ ಆರ್.ವಿ. ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ‌ ನಿಲ್ದಾಣದವರೆಗೆ ಇದೇ ಶನಿವಾರ-ಭಾನುವಾರದಂದು ಒಂದು ತಾಸು ಮೊದಲೇ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ಎರಡನೇ ಹಂತದಲ್ಲಿನ ಯಲಚೇನಹಳ್ಳಿ- ಅಂಜನಾಪುರ ವಿಸ್ತರಿಸಿದ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ ಹೇಳಿದೆ. 
ಈ ನಿಲ್ದಾಣಗಳ ನಡುವೆ ಶನಿವಾರ- ಭಾನುವಾರ ರಾತ್ರಿ 8 ಗಂಟೆಗೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. 

ಯಲಚೇನಹಳ್ಳಿ ನಿಲ್ದಾಣದಿಂದ ನಾಗಸಂದ್ರದವರೆಗೆ  ಕೊನೆಯ ರೈಲು ಯಲಚೇನಹಳ್ಳಿಯಿಂದ ರಾತ್ರಿ 8ಕ್ಕೆ ಹೊರಡಲಿದೆ. ನಾಗಸಂದ್ರದಿಂದ ಕೊನೆಯ ರೈಲು ಸಂಜೆ 6.56ಕ್ಕೆ ಹೊರಡಲಿದೆ. 

ಆದರೆ, ಆರ್.ವಿ. ರಸ್ತೆ ಮತ್ತು ನಾಗಸಂದ್ರ ಮೆಟ್ರೊ‌ ನಿಲ್ದಾಣಗಳ ನಡುವೆ ಸೇವೆಯು ಎಂದಿನಂತೆ ರಾತ್ರಿ 9 ಗಂಟೆಯವರೆಗೆ ಲಭ್ಯವಿರುತ್ತದೆ. ಸೇವೆಯು ಎಂದಿನಂತೆ ಬೆಳಿಗ್ಗೆ 7 ಕ್ಕೆ ಪ್ರಾರಂಭವಾಗಲಿದೆ. 

ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ನಿಗಮ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು