ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಹಾಲೇನಹಳ್ಳಿ ವಾರ್ಡ್ನ ತರನಂ ಭಾನು, ಉಪಾಧ್ಯಕ್ಷರಾಗಿ ಮಾಕೇನಹಳ್ಳಿಯ ಎಂ.ಜಿ. ರಂಗನಾಥ ಸ್ವಾಮಿ ಗುರುವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 16 ಸದಸ್ಯ ಬಲದ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ತಲಾ 8 ಕ್ಷೇತ್ರಗಳಲ್ಲಿ ಜಯಗಳಿಸಿದ್ದರಿಂದ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿತ್ತು.

ಅಧ್ಯಕ್ಷ ಹುದ್ದೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ತರನಂ ಭಾನು ಹಾಗೂ ಉಪಾಧ್ಯಕ್ಷ ಹುದ್ದೆಗೆ ಎಂ.ಜಿ ರಂಗನಾಥ ಸ್ವಾಮಿ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಅಭ್ಯರ್ಥಿಗಳಾಗಿ ಚಿಕ್ಕಮಣಿ ಸುಂದರ್ ಮತ್ತು ಗಂಗಾಧರ್ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳಿಗೂ ತಲಾ 8 ಮತಗಳು ಬಂದಿದ್ದರಿಂದ ಲಾಟರಿ ಎತ್ತಲಾಯಿತು. ತರನಂ ಬಾನು ಆಯ್ಕೆಯಾದರು. ಎಂಟು ಮತ ಪಡೆದ ರಂಗನಾಥ ಸ್ವಾಮಿ ಉಪಾಧ್ಯಕ್ಷರಾದರು. ಎರಡು ಮತಗಳು ಅಸಿಂಧುವಾಗಿದ್ದವು.

ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಸುರೇಶ್ ಕಲಬುರ್ಗಿ ಚುನಾವಣಾಧಿಕಾರಿಗಳಾಗಿದ್ದರು. ಪಿಡಿಒ ಮಂಜುನಾಥ್, ಪಂಚಾಯಿತಿ ಸದಸ್ಯರುಗಳಾದ ಡಿ.ಲೋಕೇಶ್, ಕೆ.ರಾಮಾಂಜನೇಯ, ನರೇಂದ್ರ ಬಾಬು, ಶೋಭಾರಾಣಿ, ನರಸಮ್ಮ, ನಾಗರತ್ನಮ್ಮ, ಹೇಮಲತಾಮ ಸಿದ್ದಲಕ್ಷ್ಮಮ್ಮ, ಲಲಿತ, ಗ.ನಾಗರಾಜು, ಹನುಮಯ್ಯ ಗಂಗಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.