ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಣ್ಣಿನ ಕಾಯಿಲೆಗೆ ಜೀನ್ ಥೆರಪಿ ಚಿಕಿತ್ಸೆ

ನಾರಾಯಣ ನೇತ್ರಾಲಯದಿಂದ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಸಿದ್ಧತೆ
Published 26 ಜುಲೈ 2023, 16:44 IST
Last Updated 26 ಜುಲೈ 2023, 16:44 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ನಾರಾಯಣ ನೇತ್ರಾಲಯವು ಕಣ್ಣಿನ ಕಾಯಿಲೆಗಳಿಗೆ ‘ಜೀನ್ ಥೆರಪಿ’ ಚಿಕಿತ್ಸೆ ನೀಡಲು ಮುಂದಾಗಿದ್ದು, ಇದರ ಮಾನವ ಕ್ಲಿನಿಕಲ್ ಪ್ರಯೋಗಗಳು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ, ‘ವಂಶಾವಳಿಯಿಂದ ಕಾಣಿಸಿಕೊಳ್ಳುವ ಕಣ್ಣಿನ ಸಮಸ್ಯೆಗಳಿಗೆ ಕೈಗೆಟುಕುವ ದರದಲ್ಲಿ ಜೀನ್ ಥೆರಪಿ ಚಿಕಿತ್ಸೆ ನೀಡುವುದು ಈ ಸಂಶೋಧನೆಯ ಉದ್ದೇಶ. ನಮ್ಮ ನೇತ್ರಾಲಯದ ಸಂಶೋಧಕರು ಕಣ್ಣಿನ ಕಾಯಿಲೆಗಳಿಗೆ ಸ್ಥಳೀಯ ಜೀನ್ ಚಿಕಿತ್ಸೆಯ ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ದೇಶದಲ್ಲಿ ಇಂತಹ ಪ್ರಯತ್ನ ಇದೇ ಮೊದಲಾಗಿದೆ. ಈ ಜೀನ್ ಥೆರಪಿಯು ರೋಗದ ಬೆಳವಣಿಗೆಗೆ ಕಾರಣವಾಗಿರುವ ದೋಷಯುಕ್ತ ಜೀನ್‌ಗಳನ್ನು ರೋಗಶಾಸ್ತ್ರೀಯವಾಗಿ ಸರಿಪಡಿಸುವ ಚಿಕಿತ್ಸಾ ವಿಧಾನವಾಗಿದೆ’ ಎಂದು ಹೇಳಿದರು.

‘ಕಳೆದ 30 ವರ್ಷಗಳಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಜೀನ್ ಥೆರಪಿ ಪ್ರಯೋಗಗಳು ನಡೆಯುತ್ತಿವೆ. ಆದರೆ, ಭಾರತದಲ್ಲಿ ಇದುವರೆಗೆ ಯಾವುದೇ ಪ್ರಯೋಗಗಳು ನಡೆದಿಲ್ಲ. ವಿದೇಶಗಳಲ್ಲಿ ಈ ಚಿಕಿತ್ಸೆಯ ಒಂದು ಇಂಜೆಕ್ಷನ್‌ಗೆ ₹ 7 ಕೋಟಿ ಇದೆ. ಇಷ್ಟು ಮೊತ್ತದ ಹಣ ನೀಡಿ ಭಾರತೀಯರು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ದೇಶದಲ್ಲಿ ಬಹಳಷ್ಟು ಮಂದಿಗೆ ಜೀನ್ ಥೆರಪಿ ಅಗತ್ಯವಿದೆ. ಹಾಗಾಗಿ, ಈ ತಂತ್ರಜ್ಞಾನಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದರೆ ಮಾತ್ರ ವೆಚ್ಚವನ್ನು ಕಡಿಮೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಆಸ್ಪತ್ರೆ ಈ ಸಂಶೋಧನೆಗೆ ಮುಂದಾಗಿದೆ’ ಎಂದರು.

‘ಜೀನ್ ಥೆರಪಿ ಚಿಕಿತ್ಸೆಗೆ ಸ್ವಯಂಪ್ರೇರಿತವಾಗಿ ಒಳಗೊಳ್ಳಲು ಬಯಸುವ ರೋಗಿಗಳು ಆಸ್ಪತ್ರೆಯ ದೂರವಾಣಿ ಸಂಖ್ಯೆ 080 66660715 ಅಥವಾ ಇಮೇಲ್ ವಿಳಾಸ genetictest@narayananethralaya.comಗೆ ಸಂಪರ್ಕಿಸಬಹುದು’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT