ಬುಧವಾರ, ನವೆಂಬರ್ 30, 2022
17 °C

‘37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇದೇ 25ರಿಂದ ಸೆ.8ರವರೆಗೆ ‘ರಾಷ್ಟ್ರೀಯ ನೇತ್ರದಾನ ಪಾಕ್ಷಿಕ’ ಎಂದು ಘೋಷಿಸಿದೆ.

ದೇಶದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಲಯನ್ಸ್‌ ಅಂತರರಾಷ್ಟ್ರೀಯ ನೇತ್ರ ಬ್ಯಾಂಕ್‌ ಜನರಲ್ಲಿ ನೇತ್ರದಾನದ ಅಗತ್ಯತೆ ಕುರಿತು ಅರಿತು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.

’ಕಾರ್ನಿಯಲ್‌’ ಅಂಧತ್ವದಿಂದ ಮಕ್ಕಳು ಮತ್ತು ಯುವಕರು ಇಡೀ ಬದುಕನ್ನು ಕತ್ತಲೆಯಲ್ಲಿ ಕಳೆಯುವ ಸಂದರ್ಭಗಳಿವೆ. ಕಸಿ ಮಾಡುವ ಮೂಲಕ ಈ ಅಂಧತ್ವವನ್ನು ನಿವಾರಿಸಬಹುದು. ಹೀಗಾಗಿ, ಶವಸಂಸ್ಕಾರದ ಸಂದರ್ಭದಲ್ಲಿ ಕಣ್ಣುಗಳನ್ನು ಸುಡುವ ಬದಲು ಅಥವಾ ಮಣ್ಣಿನಲ್ಲಿ ಹೂಳುವ ಬದಲು ದಾನ ಮಾಡಬಹುದು ಎಂದು ಲಯನ್ಸ್‌ ಅಂತರರಾಷ್ಟ್ರೀಯ ನೇತ್ರ ಬ್ಯಾಂಕ್‌ನ ವೈದ್ಯಕೀಯ ನಿರ್ದೇಶಕರಾದ ಡಾ.ರೇಖಾ ಗ್ಯಾನ್‌ಚಂದ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ 1.5 ಕೋಟಿ ಅಂಧರಿದ್ದಾರೆ. ಇವರಲ್ಲಿ 46 ಲಕ್ಷ ಮಂದಿ ಕಾರ್ನಿಯಲ್‌ ಅಂಧತ್ವಕ್ಕೆ ಒಳಗಾಗಿದ್ದಾರೆ. ಒಂದು ಸಾವಿರ ಮಕ್ಕಳಲ್ಲಿ ಒಬ್ಬರು ಅಂಧರಾಗುತ್ತಿದ್ದಾರೆ. ಆದರೆ, ನೇತ್ರದಾನ ಮಾಡುವವರಿಗೂ ಮತ್ತು ಬೇಡಿಕೆಗೂ ಅಪಾರ ಅಂತರ ಇದೆ ಎಂದು ಅವರು ವಿವರಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ www.lionsinternationaleyebankbangalore.in ವೆಬ್‌ಸೈಟ್‌ ವೀಕ್ಷಿಸಬಹುದು.
ನೇತ್ರದಾನ ಮಾಡುವವರು ಸಂಪರ್ಕಿಸಿ: 9740556666.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು