ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಗೆ ತಕ್ಕಂತೆ ಕೌಶಲ ಬೆಳೆಸಿಕೊಳ್ಳಲು ಸಲಹೆ

Last Updated 3 ಡಿಸೆಂಬರ್ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು: ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜಿನ (ಡಿಎಸ್‌ಸಿಇ) ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಶುಕ್ರವಾರ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಲಾಗಿತ್ತು.

‘ಹೈ ಪರ್ಫಾರ್ಮನ್ಸ್‌ ಇಂಡಸ್ಟ್ರೀಯಲ್‌ ಫ್ಲೂರಿಂಗ್‌’ ಕುರಿತು ನಡೆದ ಈ ಸೆಮಿನಾರ್‌ ಭಾರತೀಯ ಕಾಂಕ್ರೀಟ್‌ ಸಂಸ್ಥೆ (ಐಸಿಐ) ಸಹಯೋಗದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಡಾ.ಸಿ.ಪಿ.ಎಸ್‌. ಪ್ರಕಾಶ್‌, ‘ಹೊಸ ಶಿಕ್ಷಣ ನೀತಿಯು ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ವಿದ್ಯಾರ್ಥಿಗಳು ಮತ್ತು ಎಂಜಿನಿಯರ್‌ಗಳು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ.ಎಚ್‌.ಕೆ. ರಾಮರಾಜು ಮಾತನಾಡಿ, ‘ಸಿವಿಲ್‌ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗುತ್ತಿವೆ. ಎಂಜಿನಿಯರ್‌ಗಳು ಬದಲಾಗುತ್ತಿರುವ ತಂತ್ರಜ್ಞಾನಗಳ ಬಗ್ಗೆಯೂ ಗಮನ ನೀಡಬೇಕು. ನಮ್ಮ ಪರಿಸರ ಮತ್ತು ಪರಂಪರೆಯನ್ನು ಸಂರಕ್ಷಿಸುವ ಇಂದಿನ ತುರ್ತು ಅಗತ್ಯವಾಗಿದೆ’ ಎಂದು ತಿಳಿಸಿದರು.

ಐಸಿಐ ಗೌರವ ಅಧ್ಯಕ್ಷ ಡಾ.ಎಲ್‌.ಆರ್‌. ಮಂಜುನಾಥ್‌, ಬೆಂಗಳೂರು ಕೇಂದ್ರದ ಐಸಿಐ ಗೌರವ ಕಾರ್ಯದರ್ಶಿ ಡಾ.ಆರ್‌.ಎಲ್‌. ರಮೇಶ್‌, ಡಿಎಸ್‌ಸಿಇ ಸಂಚಾಲಕರಾದ ಡಾ. ನೀತು ಅರಸ್ ಇದ್ದರು.

ಉದ್ಯಮಗಳ ಪ್ರತಿನಿಧಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಡಿಎಸ್‌ಸಿಇ ಅಧ್ಯಾಪಕರು ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ಸೆಮಿನಾರ್‌ನಲ್ಲಿ ಭೌತಿಕವಾಗಿ ಸುಮಾರು 100 ಮಂದಿ ಹಾಗೂ ವರ್ಚುವಲ್‌ ವ್ಯವಸ್ಥೆಯ ಮೂಲಕ 200 ಮಂದಿ
ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸೆಮಿನಾರ್‌ನಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗಾಗಿ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT