ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಪಿಎ: 30–31ಕ್ಕೆ ಸಂಗೀತ, ನೃತ್ಯ ಕಾರ್ಯಕ್ರಮ

Published 28 ಮಾರ್ಚ್ 2024, 21:02 IST
Last Updated 28 ಮಾರ್ಚ್ 2024, 21:02 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ (ಎನ್‌ಸಿಪಿಎ) ಸಂಸ್ಥೆಯು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ (ಬಿಐಸಿ) ಸಹಯೋಗದಲ್ಲಿ ಇದೇ 30 ಮತ್ತು 31ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಅನ್ ಬಾಕ್ಸಿಂಗ್ ಬೆಂಗಳೂರು ಹಬ್ಬ’ದ ಭಾಗವಾಗಿ ವೈವಿಧ್ಯಮಯ ಪಾಶ್ಚಿಮಾತ್ಯ, ಅಂತರರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಕಾರ್ಯಕ್ರಮಗಳ ವಿವರ: ಮಾ. 30ರಂದು ಸಂಜೆ 6ಕ್ಕೆ ಸಿಂಫೋನಿ ಆಫ್ ಆರ್ಕೆಸ್ಟ್ರಾ ಇಂಡಿಯಾ ತಂಡದಿಂದ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ, 7.15ಕ್ಕೆ ಸಿಮರ್ ಸಿಂಗ್, ಪ್ರಿಯಾಂಶಿ ಬನ್ಸಲ್, ವಾನಿಕಾ ಸಂಗ್ತಾನಿ ಮತ್ತು ಅಭಿನ್ ಜೋಶಿ ಅವರಿಂದ ಕವಿತಾ ವಾಚನ.

ಮಾ. 31 ರಂದು ಸಂಜೆ 6ಕ್ಕೆ ದಿಶಾ – ರತಿಕಾಂತ್ ಮೋಹಪಾತ್ರರಿಂದ ಸೃಜನ್ – ಒಡಿಸ್ಸಿ ನೃತ್ಯ ಪ್ರದರ್ಶನ. 7.30ಕ್ಕೆ ಡೆರೆನ್‌ ದಾಸ್‌ ಮತ್ತು ‘ದಿ ಸಿಕ್ತ್ ಸೆನ್ಸ್‌’ ತಂಡದಿಂದ ‘ಪಾಪ್‌, ರೆಟ್ರೊ, ರಾಕ್ ಎನ್ ರೋಲ್ ಮತ್ತು ಕ್ಲಾಸಿಕ್‌ ರಾಕ್‌’ ಅಂತರರಾಷ್ಟ್ರೀಯ ಸಂಗೀತ ನಡೆಯಲಿದೆ.

ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಇರಲಿದೆ. ಸಂಗೀತ ಸಂಜೆ ಸವಿಯಲು ಬರುವವರಿಗೆ ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ಉಚಿತ ಬಸ್‌ ಸೇವೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT