ನೆಲಮಂಗಲ: ‘ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಪಂಚಾಯಿತಿ ಮಟ್ಟದಲ್ಲೇ ಅರ್ಜಿಗಳ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು’ ಎಂದುರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.

ವಿಶ್ವಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್, ಎಸ್ಸಿಲಾರ್ ವಿಷನ್ ಫೌಂಡೇಷನ್ ಹಾಗೂ ಐ–ದೃಷ್ಠಿ ಕಣ್ಣಿನ ಆಸ್ಪತ್ರೆಗಳ ಸಹಯೋಗದಲ್ಲಿ ನಗರೂರಿನಲ್ಲಿ ಹಮ್ಮಿಕೊಂಡಿದ್ದಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಸಮಗ್ರ ಆಡಳಿತದ ದೈನಂದಿನ ಕಾರ್ಯವೈಖರಿಯನ್ನು ಸಾರ್ವಜನಿಕರ ಗಮನಕ್ಕೆ ತರಲು ‘ಮಾಹಿತಿ ಫಲಕ’ (ಡ್ಯಾಶ್‌ಬೋರ್ಡ್) ವ್ಯವಸ್ಥೆ ರೂಪಿಸಲು ಯೋಜಿಸಲಾಗಿದೆ’ ಎಂದರು.

ಎಸ್ಸಿಲಾರ್ ಫೌಂಡೇಷನ್‌ನ ಟ್ರಸ್ಟಿ ಮಹೇಶ್, ‘500ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ನಡೆದಿದ್ದು, 162 ಮಂದಿಗೆ ಕನ್ನಡಕ ವಿತರಿಸಲಾಗಿದೆ. 40 ಜನರನ್ನು ಉಚಿತ ಶಸ್ತ್ರಚಿಕಿತ್ಸೆಗೆ ಪರಿಗಣಿಸಲಾಗಿದೆ’ ಎಂದು ಹೇಳಿದರು.

ನಗರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ವಿ.ಯಶೋಧ, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಎನ್.ಎಚ್.ನರೇಂದ್ರಬಾಬು, ಗೋವಿಂದರಾಜು, ಫೌಂಡೇಷನ್‌ನಧರ್ಮಪ್ರಸಾದ್ ರೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.