ಗುರುವಾರ , ಜೂನ್ 24, 2021
22 °C

ಹೆಬ್ಬಾಳ ಕ್ಷೇತ್ರದಲ್ಲಿ ಅತ್ಯಾಧುನಿಕ ಕೋವಿಡ್ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವಾರ್ಡ್‌ ಸಂಖ್ಯೆ 21ರಲ್ಲಿರುವ ರಾಜೀವ್‌ ಗಾಂಧಿ ದಂತವೈದ್ಯಕೀಯ ಕಾಲೇಜು ಆವರಣದಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್‌ ಆಸ್ಪತ್ರೆ ಗುರುವಾರ ಉದ್ಘಾಟನೆಯಾಗಲಿದೆ.

’ಖಾಸಗಿ ಆಸ್ಪತ್ರೆಗಳನ್ನೂ ಮೀರಿಸುವಂತೆ ಈ ನೂತನ ಕೋವಿಡ್‌ ಆಸ್ಪತ್ರೆಯನ್ನು ರೂಪಿಸಲಾಗಿದೆ. 30 ಐಸಿಯು, 40 ಆಮ್ಲಜನಕ ವ್ಯವಸ್ಥೆ, 5 ವೆಂಟಿಲೇಟರ್‌ ಮತ್ತು 25 ಸಾಮಾನ್ಯ ಹಾಸಿಗೆಗಳ ಈ ಆಸ್ಪತ್ರೆ ಗುರುವಾರ ಉದ್ಘಾಟನೆಯಾಗಲಿದ್ದು, ಎರಡು ದಿನಗಳ ನಂತರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ‘ ಎಂದು ಶಾಸಕ ಬೈರತಿ ಸುರೇಶ್‌ ’ಪ್ರಜಾವಾಣಿ‘ಗೆ ತಿಳಿಸಿದರು.

’ಈ ಆಸ್ಪತ್ರೆಯ ನಿರ್ವಹಣೆಗೆ ಪ್ರತಿ ತಿಂಗಳು ₹1 ಕೋಟಿ ಬೇಕಾಗುತ್ತದೆ. ಬಿಬಿಎಂಪಿ ₹30 ಲಕ್ಷ ಭರಿಸಿದರೆ, ವೈಯಕ್ತಿಕವಾಗಿ ನಾನು ₹30 ಲಕ್ಷ ಹಾಗೂ ಗ್ಲೋಬಲ್‌ ಟೆಕ್ನಾಲಜೀಸ್‌ ಕಂಪನಿ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಹಾಗೂ ಮಾನ್ಯತೆ ರೋಟರಿ ಸಂಸ್ಥೆಗಳು ಉಳಿದ ₹40 ಲಕ್ಷವನ್ನು ಭರಿಸಲಿವೆ. ಕೋವಿಡ್‌ ಬಿಕ್ಕಟ್ಟು ಮುಗಿಯುವವರೆಗೆ ಈ ಆಸ್ಪತ್ರೆಯ ಸೇವೆ ಮುಂದುವರಿಯಲಿದೆ‘ ಎಂದು ಅವರು ತಿಳಿಸಿದರು.

ಆರ್.ಟಿ. ನಗರದ ಬಳಿಯ ಚೋಳನಗರದಲ್ಲಿರುವ ‌ಈ ರಾಜೀವ್‌ ಗಾಂಧಿ ದಂತವೈದ್ಯಕೀಯ ಕಾಲೇಜಿನ ಕೆಲವು ಕೊಠಡಿಗಳನ್ನು ಬಾಡಿಗೆ ಪಡೆದು ಈ ಆಸ್ಪತ್ರೆ ರೂಪಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಭಾಗವಹಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು