ಬೆಂಗಳೂರು: ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂ ವೀಕ್ಷಣಾ ಉಪಗ್ರಹ ‘ನಿಸಾರ್’, ಬುಧವಾರ ಬೆಂಗಳೂರು ತಲುಪಿತು.
‘ನಾಸಾ–ಇಸ್ರೊ ಸಿಂಥೆಟಿಕ್ ಅಪರ್ಚರ್ ರಾಡಾರ್’ (ಎನ್‌ಐಎಸ್‌ಎಆರ್) ಎಂಬ ಉಪಗ್ರಹವನ್ನು ಹೊತ್ತು ಬಂದ ಅಮೆರಿಕ ವಾಯುಪಡೆಯ ಸಿ-17 ವಿಮಾನವು ಬೆಂಗಳೂರಿಗೆ ಬಂದಿಳಿಯಿತು’ ಎಂದು ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿ ತಿಳಿಸಿದೆ.
‘ಇದು ಅಮೆರಿಕ ಮತ್ತು ಭಾರತದ ನಡುವಿನ ಬಾಹ್ಯಾಕಾಶ ಕ್ಷೇತ್ರದಲ್ಲಿನ ಬಾಂಧವ್ಯದ ಪ್ರತೀಕ’ ಎಂದು ಕಾನ್ಸುಲೇಟ್ ಟ್ವೀಟ್ ಮಾಡಿದೆ.
ಕೃಷಿ ಮ್ಯಾಪಿಂಗ್ ಮತ್ತು ಭೂಕುಸಿತದ ಅಪಾಯ ಎದುರಿಸುತ್ತಿರುವ ಪ್ರದೇಶಗಳ ಅಧ್ಯಯನ ಸೇರಿದಂತೆ ವಿವಿಧ ಉದ್ದೇಶ
ಗಳಿಗಾಗಿ ‘ನಿಸಾರ್’ ಅನ್ನು ಬಳಸಲು ಇಸ್ರೊ ಉದ್ದೇಶಿಸಿದೆ. ಈ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂದಿನ ವರ್ಷ ಉಡಾವಣೆ ಮಾಡುವ ಮಾಡುವ ನಿರೀಕ್ಷೆಯಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.