ಬುಧವಾರ, ಜುಲೈ 28, 2021
23 °C

ಮೈ ಗೇಟ್ ಕಂಪನಿ ವಿರುದ್ಧ ಪ್ರತಿ ದೂರು ದಾಖಲಿಸಿದ ‘ನೋ ಬ್ರೋಕರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ದತ್ತಾಂಶ ಕದ್ದಿಟ್ಟುಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ತಮ್ಮ ವಿರುದ್ಧ ದಾಖಲಾಗಿದ್ದ ದೂರಿಗೆ ‘ನೋ ಬ್ರೋಕರ್’ ಕಂಪನಿಯ ಸಂಸ್ಥಾಪಕರು ಸಹ ಪ್ರತಿದೂರು ದಾಖಲಿಸಿದ್ದಾರೆ.

‘ಕಂಪನಿಯ ಕೆಲ ಸಿಬ್ಬಂದಿಗೆ ಲಂಚದ ಆಮಿಷ ತೋರಿಸಿ ಬೆದರಿಕೆಯೊಡ್ಡಿದ್ದ ನೋ ಬ್ರೋಕರ್ ಕಂಪನಿ ಸಂಸ್ಥಾಪಕರು ಹಾಗೂ ಇತರರು, ದತ್ತಾಂಶವನ್ನು ಹ್ಯಾಕ್‌ ಮಾಡಿ ಕದ್ದಿದ್ದಾರೆ’ ಎಂದು ಆರೋಪಿಸಿ  ‘ವೀವಿಸ್ ಟೆಕ್ನಾಲಜೀಸ್ (ಮೈ ಗೇಟ್)’ ಕಂಪನಿಯ ಎ. ವಿಜಯ್ ಎಂಬುವರು ನೋ ಬ್ರೋಕರ್ ವಿರುದ್ಧ ಸಿಐಡಿ ಸೈಬರ್‌ ವಿಭಾಗಕ್ಕೆ ಇತ್ತೀಚೆಗಷ್ಟೇ ದೂರು ನೀಡಿದ್ದಾರೆ.

ಅದಕ್ಕೆ ಪ್ರತಿಯಾಗಿ ಬೆಳ್ಳಂದೂರು ಠಾಣೆಗೆ ದೂರು ನೀಡಿರುವ ‘ನೋ ಬ್ರೋಕರ್’ ಕಂಪನಿಯ ಆಶೀಶ್ ಶಾಂದ್, 'ಮೈ ಗೇಟ್ (ವೀವಿಸ್ ಟೆಕ್ನಾಲಜೀಸ್) ಕಂಪನಿಯವರೇ ನಮ್ಮ ಕಂಪನಿಯ ದತ್ತಾಂಶವನ್ನು ಕದ್ದಿದ್ದಾರೆ. ದತ್ತಾಂಶವನ್ನು ದುರುಪಯೋಗಪಡಿಸಿಕೊಂಡು ನಮ್ಮ ಕಂಪನಿಗೆ ಕೆಟ್ಟ ಹೆಸರು ತಂದಿದ್ದಾರೆ. ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಬೆಳ್ಳಂದೂರು ಪೊಲೀಸರು, ‘ಆಶೀಶ್ ನೀಡಿರುವ ದೂರು ಆಧರಿಸಿ, ಮೈ ಗೇಟ್ ಕಂಪನಿಯ ವಿಜಯ್‌ಕುಮಾರ್, ಶ್ರೇಯಾನ್ಸ್, ದೇಬರ್ಶಿ, ಅನುಜ, ಅಭಿಷೇಕ್‌ಕುಮಾರ್ ಸೇರಿದಂತೆ 14 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಸಿಐಡಿ ಸೈಬರ್ ವಿಭಾಗದಿಂದಲೂ ಮಾಹಿತಿ ಪಡೆಯಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು