ಬುಧವಾರ, ಏಪ್ರಿಲ್ 8, 2020
19 °C

ಕ್ಯಾಸಿನೊ ಚಿಂತನೆ ಇಲ್ಲ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕ್ಯಾಸಿನೊ ಆರಂಭಿಸುವ ಚಿಂತನೆ ಸರ್ಕಾರಕ್ಕಾಗಲಿ ಅಥವಾ ಪಕ್ಷಕ್ಕಾಗಲಿ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಕ್ಯಾಸಿನೊ ಆರಂಭಿಸಲು ಸರ್ಕಾರ ಅನುಮತಿ ನೀಡುತ್ತದೆ ಎಂದು ಎಲ್ಲೂ ಹೇಳಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಲವು ದೇಶಗಳಲ್ಲಿ ಜೂಜಿನ ಪ್ರವಾಸೋದ್ಯಮವಿದೆ. ಅಲ್ಲಿಗೆ ನಮ್ಮ ರಾಜ್ಯದ ಸಾಕಷ್ಟು ಜನರು ಜೂಜು ಆಡಲೆಂದೇ ಹೋಗುತ್ತಾರೆ. ನಮ್ಮ ರಾಜ್ಯದಲ್ಲೂ ಆಯ್ದ ಕೆಲವು ಕಡೆಗಳಲ್ಲಿ ಆರಂಭಿಸಲು ಅವಕಾಶವಿದೆ ಎಂದು ಹೇಳಿದ್ದೆ. ಇದರ ಜತೆಗೆ ಹಳ್ಳಿ ಪ್ರವಾಸೋದ್ಯಮ, ಪರಂಪರೆ ಪ್ರವಾಸೋದ್ಯಮ, ಮುಂಗಾರು
ಪ್ರವಾಸೋದ್ಯಮಕ್ಕಿರುವ ಅವಕಾಶಗಳ ಬಗ್ಗೆಯೂ ಹೇಳಿದ್ದೆ. ಇವುಗಳ ಬಗ್ಗೆ ಪ್ರಚಾರ ಕೊಡದೆ ಕೇವಲ ಕ್ಯಾಸಿನೊ ಬಗ್ಗೆ ವ್ಯತಿರಿಕ್ತ ಪ್ರಚಾರ ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)